ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಬೆಂಗಳೂರಿನ ಸದಾಶಿವನಗರದಲ್ಲಿ ಗುರುವಾರ ಭೇಟಿಯಾದರು. ಈ ಸಂರ‍್ಭದಲ್ಲಿ ರಾಯಬಾಗ ತಾಲೂಕಿನ ದಿಗ್ಗೇವಾಡಿ ಹಾಗೂ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮಗಳ ನಡುವೆ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿಯು ಪ್ರಗತಿಯಲ್ಲಿದ್ದು, ಬಾಕಿ ಉಳಿದ ಕಾಮಗಾರಿಗೆ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಹಾಗೂ ಈ ಬ್ಯಾರೆಜ್ ಮೇಲೆ ರಸ್ತೆ ನರ‍್ಮಾಣ ಕಾಮಗಾರಿಯು ತ್ವರಿತವಾಗಿ ಜರುಗಬೇಕೆಂದು ಡಾ.ಕೋರೆಯವರು ಉಪಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಿದರು. ಮನವಿಗೆ ಸ್ಪಂದಿಸಿ ಸಮಾಲೋಚಿಸಿದ ಡಿಸಿಎಂ ಶೀಘ್ರವಾಗಿ ಕ್ರಮಗೊಳ್ಳಲಾಗುವುದೆಂದು ತಿಳಿಸಿದರು.