ಗದಗ-೨೦:ಕರ್ನಾಟಕ ರಾಜ್ಯದಲ್ಲಿ ಇಚಿತ್ತಿನ ದಿನಗಳಲ್ಲಿ ಕಾಲೇಜಿನ ಹೆಣ್ಣು ಮಕ್ಕಳು ಮೇಲೆ ಅತ್ಯಾಚಾರ ಕೋಲೆ ಮಾಡುವುದು ಹೆಚ್ಚಿದೆ, ಅದೇ ರೀತಿ ನಮ್ಮ ಗದಗ ಜಿಲ್ಲೆಯಾದ್ಯಂತ ಅಕ್ರಮವಾಗಿ ಗಾಂಜಾ ಅಫೀಮ ಮದ್ಯಪಾನ ಮಾರಾಟ ಕೆಲವು ಕಾಲೇಜು ಆಸುಪಾಸಿನಲ್ಲಿ ಮಾರಾಟ ಮಾಡುತ್ತಿದ್ದಾರೆ, ಇದ್ದರಿಂದ ಕೆಲವು ಕಾಲೇಜು ಹುಡುಗರ ಹಾಗೂ ಅಲ್ಲಿಯ ಸ್ಥಳೀಯ ಹುಡುಗರಿಂದ ಕುಡಿದ ಮತ್ತಿನಲ್ಲಿ. POST METRIC MINORITY HOSTEL ಹಾಗೂ ROTARY CENTRAL HIGH SCHOOL GADAG-BETAGERI , ಆಟೋ ಕಾಲೋನಿ ಕೃಷ್ಣಾನಗರ ಅಲ್ಲಿಗೆ ಶಿಕ್ಷಣ ಕಲಿಯಲು ಬಂದಾಂತ ಹೆಣ್ಣು ಮಕ್ಕಳು ಮೇಲೆ ಲೈಂಗಿಕ ಕಿರುಕುಳ ನೀಡುವುದು, ರಸ್ತೆ ಬದಿಯಲ್ಲಿ ಬಂದು ಕೂಗಾಡುವುದು, ಕೆಟ್ಟ ಕೆಟ್ಟದಾಗಿ ಮಾತನಾಡುತ್ತಿದ್ದಾರೆ, ಹಾಗೂ ಕೆಲವು ಪುಂಡರು ಹೆಣ್ಣು ಮಕ್ಕಳು ಕೈ ಹಿಡಿದು ಎಳಿಯುವುಂತ ಕೃತ್ಯವೆಸುಗುತ್ತಿದ್ದಾರೆ. ದಿನ ನಿತ್ಯ ಹಿಂಸೆಸುತ್ತಿದ್ದಾರೆ . ಇದರಿಂದ ಹೆಣ್ಣು ಮಕ್ಕಳು ಅವರ ತಂದೆ ತಾಯಿಗಳಿಗೆ ಕೂಡಾ ತಿಳಿಸಲು ಆಗುತ್ತಿಲ್ಲ, ಶಾಲಾ ಕಾಲೇಜು ಬಿಡಿಸಿ ಮನೆಯಲ್ಲೇ ಇಟ್ಟಲುಕೋಳ್ಳುತ್ತಾರೆ ಎಂಬ ಬಯ ಒಂದು ಕಡೆ ಆದರೆ, ಇನ್ನೋಂದು ಕಡೆ ಏನಾದರೂ ಹೇಳಿದರೆ ನೀನ ಕೋಲೆ ಮಾಡತ್ತಿನಿ ನಿಮ್ಮ ಜೀವನ ಹಾಳು ಮಾಡುತ್ತೀನಿ ಎಂದು ಬೇದರಿಕೆ ಹಾಕ್ಕು ತ್ತಿದ್ದಾರೆ.
ಇದರಿಂದ ಗದಗ ಜಿಲ್ಲೆಯದಾಂತ್ಯ ಹೆಣ್ಣು ಮಕ್ಕಳು ಯಾವುದೇ ರಕ್ಷಣೆ ಇಲ್ಲದಂತಾಗಿದೆ . ತಾವು ಮಾನ್ಯ ಉಪವಿಭಾಗಾಧಿಕಾರಿ ಅಧಿಕಾರಿಗಳು ಇತ ಕಡೆ ಗಮನಹರಿಸಿ ಗಾಂಜಾ ಅಫೀಮ ಮದ್ಯಪಾನ ಮಾರಾಟ ಮಾಡುವವರು ಮೇಲೆ ಹಾಗೂ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ನೀಡುವರ ಮೇಲೆ ಕೂಡಲೇ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಯುವ ಕರ್ನಾಟಕ ಭೀಮ್ ಸೇನೆ, ಗದಗ ಜಿಲ್ಲಾಧ್ಯಕ್ಷರಾದ ರಾಮು ಬಾಗಲಕೋಟ ನಾಯಕತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯುವ ಕರ್ನಾಟಕ ಭೀಮ್ ಸೇನೆ ಗದಗ ಜಿಲ್ಲಾ ಉಪಾಧ್ಯಕ್ಷರಾದ ಖಾಜಾಸಾಬ ಗಬ್ಬೂರು, ಅಲ್ತಾಫ್ ಸಾಬ್ ಕಟ್ಟಿಮನಿ. ಶಬ್ಬಿರ ತಹಶೀಲ್ದಾರ್ ಗದಗ ತಾಲುಕು ಅಧ್ಯಕ್ಷರು , ಮೆಹಬೂಬ್ ಬೇಟಗೇರಿ ಜಿಲ್ಲಾ ಖಜಾಂಚಿ,ಯಕಂಣ ತೇರದಾಳ ಸಂಚಾಲಕರು, ಅನೇಕ ಕಾರ್ಯಕರ್ತರು ಹಾಜರಿದ್ದರು