23/12/2024

ಬೆಳಗಾವಿ-02: : ಇಂದಿನ ಜಾಗತಿಕ ಮಾರುಕಟ್ಟೆಯು ಅತೀ ವೇಗವಾಗಿ ಮತ್ತು ಹೊಸ ದಿಕ್ಕಿನಲ್ಲಿ ಬೆಳೆಯುತ್ತಿದ್ದು, ಹೊಸ ಮಾರುಕಟ್ಟೆಯಲ್ಲಿ ಎದುರಾಗುವ ಹೊಸ ಹೊಸ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಸನ್ನದ್ದರಾಗಬೇಕೆಂದು ಬಿಸಿಸಿಐ ಮಾಜಿ ಅಧ್ಯಕ್ಷರು ಹಾಗೂ ರವಿ ಇಂಡಸ್ಟಿçÃಜ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರೋಹನ ಜುವಳಿ ಅವರು ಅಭಿಪ್ರಾಯಪಟ್ಟರು.


ಭರತೇಶ ಶಿಕ್ಷಣ ಸಂಸ್ಥೆಯ ಗ್ಲೋಬಲ ಬಿಜಿನೆಸ್ ಸ್ಕೂಲ ಮಹಾವಿದ್ಯಾಲಯದಲ್ಲಿ ಪದವಿ ದಿನ ಅಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಠಿಣ ಪರಿಶ್ರಮ, ಹೊಸ ಸವಾಳು ಸ್ವೀಕರಿಸುವ ಮಾನಸೀಕತೆ, ಉತ್ತಮ ನಿರ್ವಹಣಾ ತಂಡ, ಹಾಗೂ ಗ್ರಾಹಕರೊಂದಿಗೆ ಉತ್ತಮ ಸಂಬAಧಗಳು ನಿಮ್ಮನ್ನು ಯಶಸ್ವಿಯಾಗಿ ಮಾಡಬಲ್ಲವು . ಈ ಎಲ್ಲ ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ನಿಮ್ಮಲ್ಲಿರುವ ಕೌಶಲ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಅವರು ಹೇಳಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಗ್ಲೋ ಕಾಸ್ಟ ಘೌಂರ‍್ಸ್ ವ್ಯವಸ್ಥಾಪಕ ನಿರ್ದೇಶಕ ಆಶಾಲತಾ ಮಾಲಿಯಾ ಅವರು ಮಾತನಾಡಿ, ವಿಭೀನ್ನವಾದ ಮಾರುಕಟ್ಟೆಯ ಸವಾಲುಗಳು ದಿನನಿತ್ತಯದ ಹೊಸ ಕಲಿಕಾ ಪಾಠಕೇಂದ್ರವಾಗಿದೆ. ಹಾಗಾಗಿ ಪದವಿ ಪೂರ್ವ ಶೀಕ್ಷಣ ಪೂರೈಸಿದರೂ ಸಹ ನಿರಂತರ ಕಲಿಕೆಯ ಅಭ್ಯಾಸವನ್ನು ರೂಢಿಸಿಕೊಳ್ಳಬೇಕೆಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯ ಆಡಳಿತ ಮಂಡಳಿಯ ಸದಸ್ಯ ಮಹಾವೀರ ಉಪಾಧ್ಯೆ ಅವರು ಮಾತನಾಡಿ, ಪ್ರಸ್ತುತ ಮಾರುಕಟ್ಟೆ ಹಾಗೂ ಇಂದಿನ ಆಡಳಿತಾತ್ಮಕ ವ್ಯವಹಾರದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಸಮಾರಂಭದಲ್ಲಿ ಡಾ. ಪದ್ಮಪ್ರೀಯಾ ಕತಗಲ್ ಅವರು ವಾರ್ಷಿಕ ವರದಿ ವಾಚನ ಮಾಡಿದರು. ಮಹಾವಿದ್ಯಾಲಯದ ಆಡಳಿತಾಧಿಕಾರಿ ಡಾ. ಪ್ರಸಾದ ದಡ್ಡಿಕರ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿನಿಗಳಾದ ಸನಮ್ ಮತ್ತು ವರ್ಷಾ ಇವರು 2021-23 ಶೈಕ್ಷಣಿಕ ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳೆಂದು ಹಾಗೂ ವಿದ್ಯಾರ್ಥಿ ಮಂಜುನಾಥ ಅತ್ಯುತ್ತಮ ಗ್ರಂಥಾಲಯ ಬಳಕೆದಾರ ಆಯ್ಕೆಯಾದ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


error: Content is protected !!