ಬೆಳಗಾವಿ-೧೬: ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಸ್ಕ್ರೂಡ್ರೈವರ್ ನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ನಗರದಲ್ಲಿ ಮಹಾಂತೇಶ ನಗರದ ಸೇತುವೆ ಬಳಿ ನಡೆದಿದೆ.
ಕೊಲೆಯಾದ ಯುವಕನನ್ನು ಬೆಳಗಾವಿ ನಗರದ ಗಾಂಧಿ ನಗರದ ಇಬ್ರಾಹಿಂ ಗೌಸ್ (22) ಎಂದು ಗುರುತಿಸಲಾಗಿದೆ ಎಂದು ತಿಳಿದಿದೆ.
ಇಬ್ರಾಹಿಂ ಗಾಂಧಿನಗರದ ಯುವತಿಯನ್ನು ಪ್ರೀತಿಸುತ್ತಿದ್ದ, ಇಂದು ಯುವತಿಯ ಜೊತೆ ಇಬ್ರಾಹಿಂ ಬೈಕ್ ನಲ್ಲಿ ಹೋಗುತ್ತಿದ್ದುದನ್ನು ನೋಡಿದ ಯುವತಿಯ ಸಹೋದರ ಆತನನ್ನು ಹತ್ಯೆ ಮಾಡಿದ್ದಾನೆ. ಬಾಲಕಿಯ ಸಹೋದರ ಮುಝಮ್ಮಿಲ್ ಸತ್ತಿಗೇರಿ ಇಬ್ರಾಹಿಂ ಗೌಸ್ ನನ್ನು ಸ್ಕ್ರೂಡ್ರೈವರ್ ನಿಂದ ಕೊಂದಿದ್ದಾನೆ. ಗಾಯಗೊಂಡ ಇಬ್ರಾಹಿಂನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.