11/01/2025
IMG-20240513-WA0006

ಬೆಳಗಾವಿ-೦೯- ಎಲ್. ಎಸ್. ಶಾಸ್ತ್ರೀಯವರು ಸಾವಿರಾರು ಲೇಖನಗಳನ್ನು, ಅಂಕಣ ಬರಹಗಳನ್ನು ಬರೆದಿದ್ದು ನೂರಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಬರಹ, ಭಾಷಣಗಳ ಹಿಂದೆ ಆಳವಾದ ಅಭ್ಯಾಸವಿರುತ್ತದೆ ಎಂದು ಹಿರಿಯ ಲೇಖಕರಾದ ಡಾ. ಸಿ. ಕೆ. ಜೋರಾಪೂರ ಅವರು ಇಂದಿಲ್ಲಿ ಹೇಳಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಮತ್ತು ಕೃಷ್ಣಮೂರ್ತಿ ಪುರಾಣಿಕ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯ ಸಾಹಿತಿ ಪತ್ರಕರ್ತ ಎಲ್. ಎಸ್. ಶಾಸ್ತ್ರೀಯವರ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭವನ್ನು ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಜೋರಾಪೂರ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತ ಡಾ, ಜೋರಾಪೂರ ಸಾಹಿತ್ಯ ಸಂಗಿತ, ಗಮಕ ಇವೆಲ್ಲವುಗಳನ್ನ ಮೇಳೈಸಿಕೊಂಡ ಅಪರೂಪದ ಏಕೈಕ ವ್ಯಕ್ತಿಯೆಂದರೆ ಎಲ್. ಎಸ್. ಶಾಸ್ತ್ರೀಯವರು. ೮೧ ವರ್ಷದ ಶಾಸ್ತ್ರೀಯವರು ಸಾಂಸ್ಕೃತಿಕ ಲೋಕಕ್ಕೆ ಕೊಟ್ಟ ಸೇವೆಯನ್ನ ಕರ್ನಾಟಕ ಸರ್ಕಾರ ಗುರುತಿಸಿ ಗೌರವಿಸಬೇಕೆಂದು ಹೇಳಿದರು.
‘ಕನ್ನಡ ಮರಾಠಿ ಸ್ನೇಹಸೇತು ಕೃ. ಶಿ. ಹೆಗಡೆ’ ಕೃತಿಯನ್ನು ಪರಿಚಯಿಸಿದ ಡಾ. ಪಿ.ಜಿ. ಕೆಂಪಣ್ಣವರ ಅವರು ಮಾತನಾಡುತ್ತ ಪಠ್ಯ ಪುಸ್ತಕದಲ್ಲಿ ಮಕ್ಕಳ ಮನಸ್ಸನ್ನ ಅರಳಿಸುವಂತಹ ಸಾಹಿತ್ಯವಿರಬೇಕು ಕೆರಳಿಸುವಂತಹ ಸಾಹಿತ್ಯ ಬೇಡ. ಈ ಕುರಿತಂತೆ ಮಹಾರಾಷ್ಟ್ರ ಸರ್ಕಾರ ತುಂಬ ಕಾಳಜಿ ವಹಿಸುತ್ತದೆ. ಆ ಕಾಳಜಿ ಕರ್ನಾಟಕ ಸರ್ಕಾರದಲ್ಲಿ ಇಲ್ಲವೆಂದು ತುಂಬ ನೋವಿನಿಂದ ಹೇಳಿದರು.
ಮಹಾಲಿಂಗಪುರದ ಕೆ.ಎಲ್.ಇ. ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರೂ, ಖ್ಯಾತ ಬರೆಹಗಾರರಾದ ಡಾ. ಅಶೋಕ ನರೋಡೆ ಅವರು ಕೃತಿಗಳನ್ನು ಬಿಡುಗಡೆ ಮಾಡಿ ‘ನಗೆಮಲ್ಲಿಯರ ನಾಡಿನಲಿ’್ಲ ಕೃತಿಯನ್ನು ಪರಿಚಯಿಸಿದರು. ‘ಮಾಧ್ಯಮ ದರ್ಶನ’ ಪತ್ರಕರ್ತ ರಾಜೇಂದ್ರ ಪಾಟೀಲ, ಮತ್ತು ‘ಕನ್ನಡದ ಭಾಗ್ಯ’ ಕೃತಿಯನ್ನು ಶ್ರೀಮತಿ ಮಮತಾ ಶಂಕರ ಪರಿಚಯಿಸಿದರು.
ಸಾಹಿತ್ಯ ಭವನ ವಿಶ್ವಸ್ತ ಭವನ ಗೌರವ ಕಾರ್ಯದರ್ಶಿ ರಾಮಚಂದ್ರ ಕಟ್ಟಿ, ಡಾ. ಬಸವರಾಜ ಜಗಜಂಪಿ, ಬಿ. ಎಸ್. ಗವಿಮಠ, ಪ್ರಾ. ವ್ಹಿ. ಎನ್. ಜೋಶಿ, ಎಂ. ಎ. ಪಾಟೀಲ, ಪಿ. ಬಿ. ಸ್ವಾಮಿ, ದೀಪಿಕಾ ಚಾಟೆ, ಡಾ. ಹೇಮಾ ಸೊನೋಳಿ, ಜ್ಯೋತಿ ಬದಾಮಿ, ಸ.ರಾ. ಸುಳಕೂಡೆ, ಬಸವರಾಜ ಸುಣಗಾರ ಉಪಸ್ಥಿತರಿದ್ದರು.
ಎಲ್.ಎಸ್. ಶಾಸ್ತ್ರೀ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಸುನಂದ ಮುಳೆ ಪ್ರಾರ್ಥಿಸಿದರು. ಬಸವರಾಜ ಗಾರ್ಗಿ ಸ್ವಾಗತಿಸಿದರು. ಅಶೋಕ ಮಳಗಲಿ ನಿರೂಪಿಸಿದರು. ಆನಂದ ಪುರಾಣಿಕ ವಂದಿಸಿದರು.

error: Content is protected !!