ಬೆಳಗಾವಿ-೧೩:ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಾ ಘಟಕ ವತಿಯಿಂದ ಭಾನುವಾರ ದಂದು ಕುಕಡೋಳ್ಳಿ ಗ್ರಾಮದಲ್ಲಿ ದಲಿತ ಜಾಗೃತಿ ಕಾರ್ಯಕ್ರಮ ಸಂಘಟನೆ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಬಿಂದುವಾದ ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಪ್ರವೀಣ್ ಆರ್ ಮಾದರ್. ರವರು ಶಿಕ್ಷಣ ಸಂಘಟನೆ, ಹೋರಾಟ ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ್ ಮೂರು ಅಸ್ತ್ರಗಳಿಂದ ಇಡಿ ದೇಶದ ಬದಲಾವಣೆ ಮಾಡಿದ್ದಾರೆ, ಅದೇ ರೀತಿ ನಮ್ಮ ಸಂಘಟನೆಯಲ್ಲು ಶಿಕ್ಷಣದಿಂದ ನಮ್ಮ ಸಮುದಾಯದ ಬರುವ ಯೋಜನೆಗಳನು ನಾವು ಕಂಡುಕೊಂಡು , ಸಂಘಟಿತರಾಗಿ ಸಮುದಾಯದ ಏಳಿಗೆಗಾಗಿ ಜನರಿಗೆ ಯೋಜನೆ ಮುಟ್ಟಿಸುವ ರಾಗಬೇಕು ಅಂದಾಗ ನಮ್ಮ ಬಾಬಾ ಸಾಹೇಬ ಕನಸು ನನಸಾಗುವುದು. ಮತ್ತು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ 25 °/. ಅನುದಾನ ಬಳಕೆಯಾಗದೆ ಖರ್ಚುಗಳ ಮಾಡಿ ನಕಲಿ ಬಿಲುಗಳನ್ನು ಸೃಷ್ಟಿಸಿರುತ್ತಾರೆ ಅಂತವೆಲ್ಲಾ ನೀವು ತಡೆಯಬೇಕು, ದೀನ ದಲಿತರ ಧ್ವನಿಯಾಗಿ ಪ್ರಾಮಾಣಿಕತೆಯಿಂದ ಸಂಘಟನೆ ನಡೆಸಬೇಕೆಂದು ಮಾತನ್ನಾಡಿದರು. ತದನಂತರ ರಾಜ್ಯ ಉಪಾಧ್ಯಕ್ಷರಾದ ಅಕ್ಷಯ ಕೆ ಆರ್. ರಾಜ್ಯದಲಿ ನಮ್ಮ ಕೆಲಸ ಕಾರ್ಯಗಳು ನೋಡಿ ರಾಜ್ಯವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಈ ಸಂಘಟನೆ ಇನ್ನೂ ತಾವೆಲ್ಲರೂ ಬಾನ ಎತ್ತರಕ್ಕೆ ಹೋಯಬೇಕು ಅದು ನನ್ನಾಸೆ ಎಂದು ತಿಳಿಸಿದರು. ನಂತರ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲಪ್ಪ ಅಕ್ಕಮಡಿ. ರವರು ರಾಜ್ಯದಲ್ಲಿ ಅತ್ಯಾಚಾರ ನಮ್ಮ ದಲಿತ ಸಮುದಾಯದ ಹೆಣ್ಣು ಮಕ್ಕಳು ಮೇಲೆ ದೌರ್ಜನ್ಯವಾದಗ ಯಾವುದೇ ಬೇರೆ ಬೇರೆ ಸಂಘಟನೆ ಸುದ್ದಿ ಮಾದ್ಯಮ ವರದಿ ಮಾಡಲ್ಲಾ , ಆದರೆ ನೇಹಾ ಕೋಲೆ ಆರೋಪ ಹಿಂದೂ ಮುಸ್ಲಿಂ ಅಂತ ಮಾಡಿ ಅನೇಕ ರೀತಿಯ ತಿರುವ ನೀಡಿದ್ದಾರೆ, ಅದನು ಮಾಡಲಿ ಶಿಕ್ಷೆ ಆಗ್ರಹಿಸಲಿ ಆದರೆ ನಮ್ಮ ದಲಿತ ಸಮುದಾಯದ ಹೆಣ್ಣು ಮಕ್ಕಳು ಕಡೆಗಣಿಸುವುದು ಯಾವ ನ್ಯಾಯ ಅವಾಗ ನಮ್ಮ ಈ ಸಂಘಟನೆ ಅಂತವರ ಜೋತೆ ನಿಂತು ಕೆಲಸ ಮಾಡಬೇಕೆಂದು ತಿಳಿಸಿದರು..
ತದನಂತರದ ರಾಜ್ಯಾಧ್ಯಕ್ಷರಿಗೆ, ರಾಜ್ಯ ಉಪಾಧ್ಯಕ್ಷರಿಗೆ, ರಾಜ್ಯ ಪ್ರಧಾನ ಕಾರ್ಯದರ್ಶಿ ರವರಿಗೆ
ಬೆಳಗಾವಿ ಜಿಲ್ಲಾ ಅಧ್ಯಕ್ಷ ಉದಯ ಬಸೋಜಿ ಬೆಳಗಾವಿ ತಾಲೂಕು ಘಟಕ ಅಧ್ಯಕ್ಷ ಮಂಜುನಾಥ ಜುಂಜನವರ, ಎಲ್ಲರಿಗೂ ಸನ್ಮಾಸಿದ ಕುಕಡೋಳ್ಳಿ ಗ್ರಾಮದ ಪದಾಧಿಕಾರಿಗಳು.
ಈ ಸಂದರ್ಭದಲ್ಲಿ ವಿನೋದ್ ಜುಂಜನವರ ಸದಾನಂದ ಜುಂಜಪ್ಪನರ ನಾಗೇಶ್ ಕೋಲಕಾರ ಹಾಗೂ ಕುಕಡೋಳ್ಳಿ ಗ್ರಾಮದ ಶಾಖಾ ಪದಾಧಿಕಾರಿಗಳು ಸಮಸ್ತ ನಾಗರಿಕರು ಪಾಲ್ಗೊಂಡಿದ್ದರು.