ಬೆಳಗಾವಿ-೦೭: ಬೆಳಗಾವಿ ಲೋಕಸಭಾ ಕ್ಷೇತ್ರದ ನೆಚ್ಚಿನ ಮತದಾರರಿಗೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರು ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
ನರೇಂದ್ರ ಮೋದಿ ಅವರನ್ನು 3 ನೇ ಬಾರಿಗೆ ಪ್ರಧಾನಮಂತ್ರಿಗಳಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಅವರ ಪ್ರತಿನಿಧಿಯಾಗಿ ಲೋಕಸಭೆಗೆ ಸ್ಪರ್ಧೆ ಮಾಡಿದೆ. ಟಿಕೆಟ್ ಘೋಷಣೆ ಆದಾಗಿನಿಂದಲೂ ಸತತ ಪ್ರಚಾರಕ್ಕೆ ಸಹಕಾರ ಮಾಡಿ, ಇಂದು ನನಗೆ ಬೆನ್ನೆಲುಬಾಗಿ ನಿಂತು ಇಂದು ಮತ ಚಲಾಯಿಸಿದ ಎಲ್ಲ ಮತದಾರರಿಗೂ, ಪಕ್ಷದ ಹಿರಿಯರಿಗೂ, ಧಣಿವರಿಯದೆ ದುಡಿದ ನಮ್ಮ ಎಲ್ಲ ಕಾರ್ಯಕರ್ತರಿಗೂ ಹಾಗೂ ನಾರಿಶಕ್ತಿಗೆ ಶಿರಬಾಗಿ ನಮನಗಳು” ಎಂದು ಜಗದೀಶ್ ಶೆಟ್ಟರ್ ಅವರು ಹೆಳಿದ್ದಾರೆ.