23/12/2024

ಬೆಳಗಾವಿ-01: ಯಾವುದೇ ಉಪಕರಣಗಳು ಇಲ್ಲದ ಸಮಯದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಅವರು ತಮ್ಮ ದೂರ ದೃಷ್ಟಿ ಹಾಗೂ ಕೌಶಲ್ಯದಿಂದ ಸಾಂಸ್ಕೃತಿಕ ವೈವಿಧ್ಯಮಯ ಹಾಗೂ ಇತಿಹಾಸ ಸಾರುವ ಶಿಲ್ಪಿಕಲೆಗಳನ್ನು ಕೆತ್ತನೆ ಮಾಡುವ ಮೂಲಕ ಕನ್ನಡದ ಸ್ವಾಭಿಮಾನ ಮತ್ತು ಹೆಮ್ಮೆಯನ್ನು ಎತ್ತಿ ಹಿಡಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಪ್ರೇಮಾ ಹಾವನೂರ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಸೋಮವಾರ ರಂದು ಏರ್ಪಡಿಸಲಾಗಿದ್ದ ವಿಶ್ವ ಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ರಾಜ್ಯದ ಪ್ರವಾಸಿ ತಾಣಗಳಾದ ಬೇಲೂರು, ಹಳೇಬೀಡು, ಹಂಪಿ, ಪಟ್ಟದಕಲ್ಲು ಐಹೊಳೆ, ಸೇರಿದಂತೆ ವಿವಿಧ ಪ್ರವಾಸಿ ತಾಣಗಳ ಕೆತ್ತನೆಗಳುನ್ನು ಯುವ ಪೀಳಿಗೆ ನೋಡುವುದರ ಜೊತೆಗೆ ಅವುಗಳ ಸಂದೇಶ ತಿಳಿದುಕೊಳ್ಳಬೇಕಿದೆ ಎಂದು ಸಲಹೆ ನೀಡದರು.

ಶಿಲ್ಪಕಲೆಗಳು ನಾಡಿನ ಸೌಂದರ್ಯ, ಧಾರ್ಮಿಕ ಆಚಾರ, ವಿಚಾರ ಆಡಳಿತ ಪದ್ಧತಿ, ಜನರ ಜೀವನ ಶೈಲಿ ಹೀಗೇ ಹತ್ತು ಹಲವು ಸಂದೇಶ ಸಾರುತ್ತವೆ. ಆದ್ದರಿಂದ ನಾವೆಲ್ಲರೂ ಕೂಡಿಕೊಂಡು ಶಿಲ್ಪಕಲೆಗಳನ್ನು ಉಳಿಸಿ ಬೆಳೆಸೋಣ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಮಂಜುನಾಥ ಬಡಿಗೇರ, ಜನಾರ್ಧನ ಬಡಿಗೇರ, ಕೆ ಎಚ್ ಬಡಿಗೇರ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


error: Content is protected !!