ಬೆಳಗಾವಿ-೦೧: ಮೇ2 ಗುರುವಾರ ದಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಬೆಳಗಾವಿ ಲೊಕಸಭಾ ಚುನಾವಣಾ ನಿಮಿತ್ಯ ಮಧ್ಯಾಹ್ನ 1ಘಂಟೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಳೆಕುಂದರಗಿ ಕೆ.ಎಚ್ ಗ್ರಾಮಕ್ಕೆ ಆಗಮಿಸಿ ಚುನಾವಣಾ ಬಹಿರಂಗ ಸಭೆಯಲ್ಲಿ ಭಾಗವಹಿಸಿಲಿದ್ದಾರೆ.
ಸಂಜೆ 3.30 ಕ್ಕೆ ಕೆನರಾ ಲೊಕಸಭಾ ಕ್ಷೇತ್ರದ ಖಾನಾಪೂರ ಪಟ್ಟಣದ ಶಿವಾಜಿನಗರದಲ್ಲಿರುವ ಮಲಪ್ರಭಾ ಕ್ರೀಡಾಂಗಣದಲ್ಲಿ ಚುನಾವಣಾ ನಿಮಿತ್ಯ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಪ್ರಚಾರ ಕಾರ್ಯಕ್ರಮ ಮಾಡಲಿದ್ದು ಎರಡು ಲೊಕಸಭಾ ಕ್ಷೇತ್ರದ ಮತದಾರ ಬಂಧುಗಳು ಹಾಗೂ ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.