ಬೆಳಗಾವಿ-೨೯: ನರೇಂದ್ರ ಮೋದಿಯವರು ಪ್ರಧಾನಿ ಆದ ನಂತರ ನಮಗೆ ಹೆಮ್ಮೆ ಅನಿಸುತ್ತದೆ. ಈ ಹಿಂದೆ ಬಹಳಷ್ಟು ಪ್ರಧಾನಿಗಳನ್ನು ನೋಡಿದ್ದೇನೆ. ಇಂದಿರಾಗಾಂಧಿ ನಂತರ ಗಟ್ಟಿಯಾದ ಪ್ರಧಾನಿ ಅಂದರೆ ಅದು ನರೇಂದ್ರ ಮೋದಿಯವರು. ಪ್ರಧಾನಿ ನರೇಂದ್ರ ಮೋದಿಯವರು ಭಾರತದ ನಾಯಕರು ಅಷ್ಟೇ ಅಲ್ಲ ವಿಶ್ವಾನಾಯಕರಾಗಿ ಬೆಳೆದು ನಿಂತಿದ್ದಾರೆ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಸೋಮಾವಾರ ರಾತ್ರಿ ಗೋಕಾಕ್ ಪಟ್ಟಣದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪರವಾಗಿ ಆಯೋಜನೆ ಮಾಡಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಭಾರತದ ಭದ್ರತೆ , ಆರ್ಥಿಕ ಭದ್ರತೆಗಾಗಿ ನಡೆಯುವ ಚುನಾವಣೆ ಆಗಿದೆ. ಕಳೆದ 10 ವರ್ಷದಿಂದ ನರೇಂದ್ರ ಮೋದಿಯವರು ಉತ್ತಮ ಆಡಳಿತ ನೀಡಿದ್ದಾರೆ. ಭಾರತಕ್ಕಾಗಿ ಹಗಲಿರಳು ದುಡಿಯುವ ನಾಯಕ ಅಂದರೆ ಅದು ನರೇಂದ್ರ ಮೋದಿಯವರು. ತಮ್ಮ ತಾಯಿ ನಿಧನರಾದ ನಂತರವೂ ಒಂದೆ ಒಂದು ದಿನ ರಜೆ ತಗೆದುಕೊಳ್ಳದೆ, ತಾಯಿಯ ಅಂತಮ ಸಂಸ್ಕಾರ ಮಾಡಿ, ಅಂದೆ ಪಶ್ಚಿಮ ಬಂಗಾಳದಲ್ಲಿ ಕಾರ್ಯಕ್ರಮದಲ್ಲಿ ಭಾಗಿ ಆದರು. ಅಂತಹ ಆದರ್ಶ ವ್ಯಕ್ತಿ ನಮ್ಮ ಪ್ರಧಾನಿ ಆಗಿದ್ದಾರೆ ಎಂದರೆ ನಾವು ಹೆಮ್ಮೆ ಪಡಬೇಕು. ಒಬ್ಬ ಸಾಮಾನ್ಯ ವ್ಯಕ್ತಿ ಪ್ರಧಾನಿ ಆಗಿದ್ದಾರೆ ಎಂದರೆ ಅವರು ದೇವತಾ ಮನುಷ್ಯ. ಸತತ 13 ದಿನಗಳ ಕಾಲ ಉಪಾವಸ ವೃತ ಮಾಡಿ, ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗಿ ಆದರು. ನರೇಂದ್ರ ಮೋದಿಯವರು ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ರಾಮ ಸೇತುವೆಗೆ ಹೊಗಿ ಪೂಜೆ ಸಲ್ಲಿಸಿದರು. ತಮ್ಮ ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ರಾಮ ಮಂದಿರಕ್ಕೆ ಹೊಗುವದನ್ನು ಬಹಿಷ್ಕಾರ ಮಾಡಿದರು ಎಂದು ರಮೇಶ್ ಜಾರಕಿಹೊಳಿ ಅವರು ತಿಳಿಸಿದರು.
ಈ ವೇಳೆ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್,
ಮಾಜಿ ಶಾಸಕ ಎಂ ಎಲ್ ಮುತ್ತೇಣ್ಣವರ, ಬಿಜೆಪಿ ಗ್ರಾಮೀಣ ಜಿಲ್ಲಾದ್ಯಕ್ಷ ಶುಭಾಸ ಪಾಟೀಲ್ ಅಶೋಕ ಪಾಟೀಲ್, ರಾಮದುರ್ಗ ಬಿಜೆಪಿ, ಮುಖಂಡ ಚಿಕ್ಕರೇವಣ್ಣ, ಕೆ ವಿ ಪಾಟೀಲ್, ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮಣ್ಣವರ, ದಯಾನಂದ ಮುನ್ನವಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು