ಬೆಳಗಾವಿ-೨೭: ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೆನಕನಹಳ್ಳಿಯ ಶ್ರೀ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಜಗದೀಶ ಶೆಟ್ಟರ್ ಅವರು ಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶನಿವಾರ ಬೆಳಗ್ಗೆ ಬೆನಕನಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿ ಆತ್ಮಿಯವಾಗಿ ಬರ ಮಾಡಿಕೊಂಡರು. ಊರಿನ ಮುಖಂಡರು ಇದೆ ವೇಳೆ ಜಗದೀಶ್ ಶೆಟ್ಟರ್ ಅವರಿಗೆ ಸನ್ಮಾನ ಮಾಡಿದರು. ಬಳಿಕ ಜಗದೀಶ ಶೆಟ್ಟರ್ ಅವರು ಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸದೆ ಮಂಗಳ ಅಂಗಡಿ, ಮಾಜಿ ಶಾಸಕರಾದ ಮನೋಜ ಕಡೋಳಕರ್, ಸಂಜಯ ಪಾಟೀಲ್, ವಿನಯ ಕದಮ, ಪ್ರಮುಖರಾದ ನಾಗೇಶ ಮನ್ನೋಳಕರ, ಡಾ. ರಾಜು ಪಾಟೀಲ, ಡಾ. ಯಲ್ಲಪ್ಪ ಪಾಟೀಲ, ಪರಶುರಾಮ ಪಾಟೀಲ್, ಬುದ್ದಾಜೀ ಪಾಟೀಲ್, ಬಿಜೆಪಿ ಮಂಡಲ ಅಧ್ಯಕ್ಷರಾದ ಧನಂಜಯ ಜಾಧವ ಸೇರಿದಂತೆ ಗ್ರಾಮದ ಗುರುಹಿರಿಯರು, ಮಾತೆಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.