23/12/2024
IMG-20240423-WA0013

ಖಾನಾಪುರ-೨೩: ಪೊಲೀಸ್ ಠಾಣೆಯ ಪೇದೆ ಪ್ರದೀಪ ಬಸವರಾಜ ಮೀಟಗಾರ (27)ಸಾವು, ಚಿಕ್ಕಹಟ್ಟಿಹೊಳಿ ಗ್ರಾಮದ ವೀರಭದ್ರೇಶ್ವರ ಜಾತ್ರೆಗೆ ಕರ್ತವ್ಯ ನಿರತ ಬಂದೋಬಸ್ತಿಗೆ ಹೋಗುವಾಗ ಪಾರಿಶ್ವಾಡ ರಸ್ತೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ.

ಪ್ರದೀಪ ಚಿಕ್ಕಹಟ್ಟಿಹೊಳಿ ಗ್ರಾಮದ ವೀರಭದ್ರೇಶ್ವರ ಜಾತ್ರೆಗೆ ಕರ್ತವ್ಯ ನಿರತ ಬಂದೋಬಸ್ತಿಗೆ ಹೋಗುತ್ತಿದ್ದರು . ಈ ವೇಳೆ ಖಾನಾಪೂರ ಪಾರಿಶ್ವಾಡ ಹೋಗುವ ಮಾರ್ಗದಲ್ಲಿ ಬೈಕ್ ಅಪಘಾತ ಸಂಭವಿಸಿದೆ. ಲೋಕೋಳಿ ಜೈನಕೊಪ್ಪ ಕ್ರಾಸ್ ಸಮೀಪದ ರಸ್ತೆಯ ತಿರುವಿನಲ್ಲಿ ಬೈಕ್ ಆಯತಪ್ಪಿ ಪಲ್ಟಿಯಾಗಿದೆ. ಮೃತಪಟ್ಟ ಪ್ರದೀಪ ಬಸವರಾಜ ಮೀಟಗಾರ ಖಾನಾಪುರ ತಾಲೂಕಿನ ಮುಗಳಿಹಾಳ ಗ್ರಾಮದವರು.

ಮುಗಳಿಹಾಳ ಗ್ರಾಮದಲ್ಲಿ ಪ್ರದೀಪ್ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಪ್ರದೀಪ ಅವರ ಅಂತ್ಯಕ್ರಿಯೆ ಮುಗಳಿಹಾಳ ನಡೆಯಿತು ವೇಳೆ ಅವರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಹಿಂದೂ ಧರ್ಮದ ಮರಾಠಾ ಸಮುದಾಯದ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆದವು. ಅವರ ಪಾರ್ಥಿವ ಶರೀರವನ್ನು ಮುಗಳಿಹಾಳ ಸ್ವಗ್ರಾಮದ ಮನೆಯಿಂದ ಮೆರವಣಿಗೆಯಲ್ಲಿ ತರಲಾಯಿತು, ಮಧ್ಯಾಹ್ನ 1.30 ಕ್ಕೆ ರುದ್ರಭೂಮಿಗೆ ತಲುಪಿದ ಅವರ ಪಾರ್ಥೀವ ಶರೀರದ ಸುತ್ತ ಹೂವಿನ ಅಲಂಕಾರ ಮಾಡಲಾಗಿತ್ತು. ಗ್ರಾಮದ ಗುರು ಹಿರಿಯರ ಕುಟುಂಬಸ್ಥರ ಸಮ್ಮುಖದಲ್ಲಿಖಾನಾಪೂರ ಪೊಲೀಸರು ಗನ್ ಸೆಲ್ಯೂಟ್ ಸಲ್ಲಿಸಿದರು.

ಮಗ ಪೊಲೀಸ್ ಅಧಿಕಾರಿಯಾಗಬೇಕು ಬಸವರಾಜ ಮಿಟಿಗಾರ ಕನಸು

ಪ್ರದೀಪ ಅವರಿಗೆ ಬಾಲ್ಯದಿಂದಲೂ ಪೊಲೀಸ್​ ಅಧಿಕಾರಿಯಾಗುವ ಕನಸು. ಇದು ಅವರ ಕುಟುಂಬದ ಕನಸು ಕೂಡ. ಮೊದಲಿನಿಂದಲೂ ಮಗನನ್ನು ಪ್ರದೀಪ ತಂದೆ ಬಸವರಾಜ ಅವರು ನೀನು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಮ್ಮ ಮನೆತನಕ್ಕೆಒಳ್ಳೆಯ ಹೆಸರು ತರಬೇಕಪ್ಪಾ ಅಂತಾ ಹೇಳುತ್ತಾ ಬಂದಿದ್ದರು. ಅದೇ ರೀತಿಯಲ್ಲಿಯೇ ಪ್ರದೀಪ ಬೆಳೆದವರು .
ಅಪ್ಪನಜೊತೆ ಕೂಡಿ ಮನೆಯ ಜವಾಬ್ದಾರಿ ಹೊತ್ತುಕೊಂಡವರು . ಪಧವಿ ಮುಗಿಸಿದ ನಂತ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ ಆಗಿ ಕೆಲಸ ಆರಂಭಿಸಿದರು . ಅನ್ಯಾಯ ಎಲ್ಲಿಯೇ ನಡೆದರೂ ಅಂಥವರನ್ನು ಮಟ್ಟಹಾಕುತ್ತಲೇ ಬೆಳೆದರು. ಕೊನೆಗೊಂದು ದಿನ, ಜೀವನದ ತಿರುವಿನಲ್ಲಿ ಪೊಲೀಸ ಇಲಾಖೆಯಲ್ಲಿ ಸೇರಿಕೊಂಡರು. ಮೊದಲು ಬೆಂಗಳೂರು ನಂತರ ಖಾನಾಪೂರ ಠಾಣೆಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದರು. ಉನ್ನತ ವ್ಯಾಸಾಂಗ ಮುಗಿಸಿದ ನಂತರವೂ ಪ್ರದೀಪ ಪೊಲೀಸ್ ಪೇದೆಯಾಗಿ ಹಿರಿಯ ಹಾಗೂ ಕಿರಿಯ ಪೊಲೀಸ ಅಧಿಕಾರಿಗಳ ಗರಡಿಯಲ್ಲಿ ಪಳಗಿ ಒಳ್ಳೆಯ ಹೆಸರು ಮಾಡಿಕೊಂಡಿದ್ದರು. ಅವರ ತಂಗಿ ಐಎಎಸ ಅಧಿಕಾರಿ ಪ್ರದೀಪ ಕನಸು ಕಂಡಿದ್ದರು ಆಗಬೇಕೆಂದು

ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯ್ಕ ಮಿಡಿದ ಕಂಬನಿ

ಪ್ರದೀಪ ಅವರ ಅಪಘಾತದಿಂದ ಅಕಾಲಿಕ ನಿಧನ ನನಗೆ ಅತೀ ನೋವನ್ನು ತಂದಿದೆ. ಉತ್ಸಾಹಿ ಯುವ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದು ಖಾನಾಪುರ ಪೊಲೀಸ್ ಠಾಣೆಯಲ್ಲಿ ಹಾಗೂ ಮೃತನ ಗ್ರಾಮವಾದ ನಂದಗಡದ ಮುಗಳಿಹಾಳ ನಲ್ಲಿ ಅನೇಕರು ಸೇರಿ ಕಣ್ಣೀರು ಹಾಕಿ ಮೃತನ ಗುಣಗಾನ ಮಾಡುತ್ತಿದ್ದುದು ಕಂಡು ಬಂತು.. ಮೃತ ಪ್ರದೀಪ ತನ್ನ ಸಂಬಳದಲ್ಲಿ ಅಂದ ಶಾಲೆಗೆ, ತೊಂದರೆಗೊಳಗಾದವರಿಗೆ ಸಣ್ಣಪುಟ್ಟ ಧನ ಸಹಾಯ ಮಾಡುತ್ತಿದ್ದು ಇಂದು ಅನೇಕರು ಹೇಳಿಕೊಳ್ಳುತ್ತಿದ್ದರು. ಪ್ರದೀಪ ತನ್ನ ತಂಗಿಗೆ ಯುಪಿಎಸ್ಸಿಗೆ ಸೇರಿಸುವ ಸಲುವಾಗಿ ಬೆಂಗಳೂರು ಕೋಚಿಂಗ್ ಸೆಂಟರ್ ಗೆ ಸೇರಿಸಿದ್ದು ಬೆಳಕಿಗೆ ಬಂತು ಇದನ್ನು ಕೇಳಿದ ನನಗೆ ದೇವರು ಇಷ್ಟು ನಿಷ್ಠುರನಾ ಆದರೆ ವಿಧಿಯಾಟ ದೇವರು ಪ್ರದೀಪ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬಕ್ಕೆ ಈ ಆಘಾತಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿಸುತ್ತೇನೆ.

error: Content is protected !!