ಬೆಳಗಾವಿ-೨೩: ಸವದತ್ತಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಪರ ಕಿರುತೆರೆ ನಟಿಯರು ಮತ ಯಾಚನೆ ಮಾಡಿದರು.
ಸತ್ತಿಗೇರಿ, ಗುಡುನಮಗೇರಿ, ಸೊಪ್ಪಡ್ಲ ಮೊದಲಾದ ಗ್ರಾಮಗಳಲ್ಲಿ ಪ್ರಚಾರ ನಡೆಸಲಾಯಿತು. ನಟಿಯರಾದ ಮೇಘಾ ಶೆಟ್ಟಿ, ಮೌನಾ ಗುಡ್ಡೆಮನೆ, ಭವ್ಯ ಗೌಡ ಮತ್ತಿತರರು ಭಾಗವಹಿಸಿ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರಿಗೆ ಮತ ನೀಡುವಂತೆ ವಿನಂತಿಸಿದರು.
ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್, ಶಾಸಕ ವಿಶ್ವಾಸ ವೈದ್ಯ, ಗ್ರಾಮದ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಗ್ರಾಮಸ್ಥರಿಂದ ಭಾರೀ ಬೆಂಬಲ ವ್ಯಕ್ತವಾಯಿತು.