23/12/2024
IMG-20240423-WA0001

ಬೆಳಗಾವಿ-೨೩:ಬೆಳಗಾವಿ ಯಲ್ಲಿ ಸೋಮವಾರ ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ  ರಾಜ್ಯದಾದ್ಯಂತ ಪ್ರತಿಭಟನೆ ಕರೆ ನೀಡಿದರು. ನಗರದ ಶನಿವಾರ ಕೂಟದಿಂದ ಪ್ರಾರಂಭವಾದ ಪ್ರತಿಭಟನೆಯಲ್ಲಿ ಜಂಗಮ ಸಮುದಾಯ, ಹಿಂದೂಪರ ಸಂಘಟನೆಗಳು ಹಾಗೂ ವಿವಿಧ ಮಹಿಳಾ ಸಂಘಟನೆಗಳು ಭಾಗಿಯಾಗಿ ‌ಜಸ್ಟೀಸ್ ಫಾರಾ ನೇಹಾ ಎಂಬ ಘೋಷ ವಾಕ್ಯ ಹಾಗೂ ಹಂತಕ ಫಯಾಜನನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಶನಿವಾರ ಕೂಟದಿಂದ ಪ್ರಾರಂಭವಾದ ಪ್ರತಿಭಟನೆ ರ್ಯಾಲಿ ಚನ್ನಮ್ಮ ವೃತ್ತ ತಲುಪಿ ಒಂದು ಗಂಟೆಗಳ ಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ನಂತರದಲ್ಲಿ ಫಯಾಜ ನೇಹಾ ಹತ್ಯೆ ಪ್ರಕರಣ ಪರಿಗಣಿಸಿ ಗಲ್ಲು‌ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿವಿಧ ಅನೇಕ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಜನರು ಹಾಜರಿದ್ದರು.

error: Content is protected !!