ಬೆಳಗಾವಿ-೨೩: ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ನಡೆದ ಲವ್ ಜೀಹಾದ್ ಪ್ರಕರಣದಲ್ಲಿ ನೊಂದ ಎಸ್ಸಿ ಮಹಿಳೆಯ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ
ಪತ್ರಕರ್ತರೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ, ಮಹಿಳೆಯರ ಮೇಲಾಗುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದೆ.
‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರ ತವರು ಜಿಲ್ಲೆಯಲ್ಲಿ ಹಿಂದೂ ಮಹಿಳೆಯ ಮೇಲೆ ಲವ್ ಜೀಹಾದ್ ನಡೆದಿದ್ದು ಜಾತಿ ದೌರ್ಜನ್ಯ ಹಾಗೂ ಮತಾಂದತೆಯರು ಮತಾಂತರ ನಡೆದರು ಇನ್ನೂ ಸರಿಯಾದ ರೀತಿಯಲ್ಲಿ ಪೊಲಿಸ್ ಕ್ರಮ ಆಗದಿರುವದು ಪೊಲಿಸ್ ವಿಫಲತೆ ಹಾಗೂ ಸರಕಾರದ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇಂತಹ ಕೃತ್ಯಗಳು ದಿನದಿನಕ್ಕೆ ಹೆಚ್ಚಾಗುತಿದ್ದು ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರ ಪ್ರೋತ್ಸಾಹಿಸುವಂತಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ನಿಕಟ ಪೂರ್ವ ಅಧ್ಯಕ್ಷ ಸಂಜಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್. ಎಸ್. ಸಿದ್ದನಗೌಡರ ಬಿಜೆಪಿ ನಾಯಕರಾದ ವಿರೂಪಾಕ್ಷ ಮಾಮನಿ, ಜೆಡಿಎಸ್ ನಾಯಕ ಪಂಚನಗೌಡ ದ್ಯಾಮನಗೌಡರ, ಮಲ್ಲೇಶ ಸುಳೆಭಾವಿ, ಸುಭಾಷ್ ಗೀದಿಗೌಡ್ರ, ಶೇಖರ ಗೊಕಾವಿ, ಜಿಲ್ಲಾ ಎಸ್ಸಿ ಮೊರ್ಚಾ ಅಧ್ಯಕ್ಷ ಯಲ್ಲೇಶ ಕೊಲಕಾರ, ಜಿಲ್ಲಾ ಮಹಿಳಾ ಮೊರ್ಚಾ ಅಧ್ಯಕ್ಷೆ ಡಾ.ನಯನ ಬಸ್ಮೆ, ಅಲ್ಪಸಂಖ್ಯಾತ ಮೊರ್ಚಾ ಜಿಲ್ಲಾಧ್ಯಕ್ಷ ದಾವಲಸಾಬ ಚಪ್ಟಿ, ಮಂಜು ಪಮ್ಮಾರ, ಶ್ರಿಕಾಂತ ಮಲಗೌಡ್ರ , ಅಶೋಕ ಗೋಮಾಡಿ, ಬಾಬು ಭಜಂತ್ರಿ, ಗುರು ಮೆಳವೆಂಕಿ, ಉವಪ್ಪ ಭಜಂತ್ರಿ, ಯಲ್ಲಪ್ಪ ಕಾಳಪ್ಪನವರ,ನೂರಾರು ಮುಖಂಡರು ಉಪಸ್ಥಿತರಿದ್ದರು.