23/12/2024
IMG-20240417-WA0048

ಬೆಳಗಾವಿ-೧೭ : ಉತ್ತರ ಕರ್ನಾಟಕ ಹೆಬ್ಬಾಗಿಲು ಗಂಡು ಮೆಟ್ಟಿದ ನಾಡು ಕುಂದಾನಗರಿ ಬೆಳಗಾವಿಯಲ್ಲಿ, ಪ್ರತಿ ವರ್ಷ ರಾಮ ನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅದ್ರಲ್ಲೂ, ಈ ಬಾರಿ ಅಯೋದ್ಯೆಯಲ್ಲಿ ಪ್ರಭು ಶ್ರೀ ರಾಮನ ಭವ್ಯ ಮಂದಿರ ಉದ್ಘಾಟನೆ ಆಗಿರುವುದರಿಂದ ಇನ್ನಷ್ಟು ವಿಜೃಂಭಣೆಯಿಂದ ರಾಮ ನವಮಿ ಆಚರಣೆ ಮಾಡಲಾಗುತ್ತಿದೆ. ಶ್ರೀರಾಮಮ ಭವ್ಯ ಮೆರವಣಿಗೆಯು ಶ್ರೀ ಸೇನೆ ಹಿಂದೂಸ್ಥಾನ ಸಂಘಟನೆಯ ನೇತ್ರತ್ವದಲ್ಲಿ ಆಯೋಜನೆ ಮಾಡಲಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಉಧ್ಯಾನ ವನದಿಂದ, ಶ್ರೀರಾಮ ಪಲಕ್ಕಿ, ಹಾಗೂ ಮೂರ್ತಿ ಜೊತೆಗೆ ಹನುಮಂತನ ಪೂಜೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನ ನೀಡಿದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

error: Content is protected !!