ಬೆಳಗಾವಿ-೧೪ : ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ರಾತ್ರಿ ವೇಳೆ ಬೆಳಗಾವಿ ಗ್ರಾಮೀಣ ವಿಧಾಸಭಾ ಮತ ಕ್ಷೇತ್ರದ ಮಾಜಿ ಶಾಸಕ ಸಂಜಯ್ ಪಾಟೀಲ, ಮನೆಗೆ ಮುತ್ತಿಗೆ ಹಾಕಿ ಮಾಜಿ ಶಾಸಕರ ಮೇಲೆ ಹಲ್ಲೆಗೆ ಪ್ರಯತ್ನ ಹಾಗೂ ಕೊಲೆ ಬೆದರಿಕೆಯನ್ನು ಹಾಕಿರುವ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ನ ಕಾರ್ಯಕರ್ತರು ಸೇರಿ 100 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾಜಿ ಶಾಸಕರ ಮನೆಗೆ ಚಾಕು, ಕಲ್ಲು, ಗಾಜಿನ ಬಾಟಲೆ ಹಿಡಿದುಕೊಂಡು ಅತಿಕ್ರಮಿಸಿ ಹಲ್ಲೆ ಮಾಡಿ ಕೊಲೆಗೆ ಮುಂದಾಗಿ ಜೀವ ಬೆದರಿಕೆ ಹಾಕಲಾಗಿದೆ.
ಹಲ್ಲೆಗೆ ಹಾಗೂ ಕೊಲೆಗೆ ಪ್ರಯತ್ನಿಸಿದ ಕಾಂಗ್ರೆಸ್ 100 ಜನರ ವಿರುದ್ದ ಬೆಳಗಾವಿ ಶಹಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.