23/12/2024
IMG-20240411-WA0002

ಬೆಳಗಾವಿ-೧೧: ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನಲದಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿನ ಒಟ್ಟು-1804 ವಿದ್ಯಾರ್ಥಿಗಳು ದ್ವಿತಿಯ ಪಿ.ಯು.ಸಿ ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಶೇ.90% ಕ್ಕೂ ಮೇಲ್ಪಟ್ಟು ಹೆಚ್ಚಿನ ಅಂಕ ಪಡೆದು 306, ಶೇ.80% ಕ್ಕೂ ಕ್ಕೂ ಮೇಲ್ಪಟ್ಟು ಹೆಚ್ಚಿನ ಅಂಕ ಪಡೆದು 508 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಅತ್ಯುತ್ತಮ ಸಾಧನೆಗೈದಿರುತ್ತಾರೆ.

ಪರೀಕ್ಷೆಗೆ ಹಾಜರಾದ ಇಲಾಖೆಯ ವಿದ್ಯಾರ್ಥಿನಿಲಯಗಳ ಒಟ್ಟು-1804 ವಿದ್ಯಾರ್ಥಿಗಳಲ್ಲಿ 1741 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಒಟ್ಟು 96.51% ರಷ್ಟು ಫಲಿತಾಂಶವನ್ನು ಪಡೆಯಲಾಗಿರುತ್ತದೆ ಎಂದು ಕು.ಶಿವಪ್ರಿಯಾ ಕಡೇಚೂರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಗಂಗವ್ವ ಸುಣಧೋಳಿ ರಾಜ್ಯಕ್ಕೆ 5ನೇ ರ್‍ಯಾಂಕ್:

ಸವದತ್ತಿ ತಾಲೂಕಿನ ಮೆಟ್ರಿಕ್ ನಂತರದ ಬಾಲಕಿಯರ ನಿಲಯ ಮುನವಳ್ಳಿ ವಿದ್ಯಾರ್ಥಿನಿಯಾದ ಕು.ಗಂಗವ್ವ ಸುಣಧೋಳ್ಳಿ ಇವರು 600ಕ್ಕೆ 592 ಅಂಕ ಪಡೆದು ಶೇ.99% ಪ್ರತಿಶತ ಗಳಿಸಿ ರಾಜ್ಯಕ್ಕೆ ಐದನೆ ರ‍್ಯಾಂಕ್ ಪಡೆದು ಇಲಾಖೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.

ಅದರಂತೆ, ವಿದ್ಯಾರ್ಥಿನಿಲಯಗಳಲ್ಲಿದ್ದು ವ್ಯಾಸಂಗ ಮಾಡಿ ಜಿಲ್ಲೆಗೆ ಪ್ರಥಮ ಐದು ಸ್ಥಾನ ಪಡೆದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿರುತ್ತದೆ.

ಕು.ಗಂಗವ್ವ ಸುಣದೋಳ್ಳಿ
(592) 99%
ಮೆ.ನಂ ಬಾಲಕಿಯರ ವಿ.ನಿ ಮುನವಳ್ಳಿ ತಾ||ಸವದತ್ತಿ ಕು. ಆಶ್ಮಾ ಶಾನೂರಖಾನ
(588) 98%
ಮೆ.ನಂ ಬಾಲಕಿಯರ ವಿ.ನಿ ಮಜಲಟ್ಟಿ-2 ತಾ||ಚಿಕ್ಕೋಡಿ ಕು. ವಿಶ್ವನಾಥ ಕ ವಡ್ರಾಳಿ (586) 97.67%
ಮೆ.ನಂ ಬಾಲಕರ ವಿ.ನಿ ಮಜಲಟ್ಟಿ ತಾ||ಚಿಕ್ಕೋಡಿ

ಕು.ರೇಣುಕಾ ಬಸಪ್ಪ ನಾಗೋಜಿ
(585) 97.50%
ಮೆ.ನಂ ಬಾಲಕಿಯರ ವಿ.ನಿ ಮಜಲಟ್ಟಿ-1 ತಾ||ಚಿಕ್ಕೋಡಿ ಕು.ವಿಠ್ಠಲ ಭೀ ಗಡ್ಡೇದಾರ
(585) 97.50%
ಮೆ.ನಂ ಬಾಲಕರ ವಿ.ನಿ ಮಜಲಟ್ಟಿ ತಾ||ಚಿಕ್ಕೋಡಿ

ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿದ್ದುಕೊಂಡು ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ‌ ಅಭಿನಂದಿಸಿದ್ದಾರೆ ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಶಿವಪ್ರಿಯಾ ಕಡೇಚೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!