23/12/2024
IMG-20240402-WA0359
ಬೆಳಗಾವಿ-೦೨:ಸಾರ್ವತ್ರಿಕ ಲೋಕ ಸಭಾ ಚುನಾವಣೆ-2024 ರ ಅಂಗವಾಗಿ ಜಿಲ್ಲಾಡಳಿತ  ಮತ್ತು ಜಿಲ್ಲಾ ಪಂಚಾಯತ ಜಿಲ್ಲಾ ಸ್ವೀಪ್ ಸಮಿತಿ ಬೆಳಗಾವಿ ಹಾಗೂ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಳಗಾವಿ ವತಿಯಿಂದ ಮತದಾರರಿಗೆ ಮತದಾನದ ಜಾಗೃತಿ ಮೂಡಿಸುವಂತೆ ಮಂಗಳವಾರ ಭೀಮ್ಸ ಕಾಲೇಜು ಮುಖ್ಯೋಪಾಧ್ಯಾಯರಿಂದ ಚೆನ್ನಮ್ಮ ವೃತ್ತದ ಮಾರ್ಗವಾಗಿ, ಮಹಾವೀರ ಕ್ಯಾಂಟಿನ್ –ಸಿ.ಪಿ.ಇಡಿ ಮೈದಾನ- ಗಾಲ್ಫ್ ಕೋರ್ಸ ರಸ್ತೆ- ಜಿಲ್ಲಾಧಿಕಾರಿಗಳ ವಸತಿ ಗೃಹ –ಕೆ.ಜಿ.ಐ.ಡಿ ಕಚೇರಿ –ಸದಾಶಿವ ನಗರ-ತಮ್ಮಣ್ಣಾ ಆರ್ಕೆಡ್–ಭೀಮ್ಸ ಕಾಲೇಜು ಮುಖ್ಯದ್ವಾರದವರೆಗೆ ಮತದಾನದ ಜಾಗೃತಿ ಮ್ಯಾರಥಾನ್ ಹಮ್ಮಿಕೊಳ್ಳಲಾಯಿತು. ಈ ಮ್ಯಾರಥಾನ ಕಾರ್ಯಕ್ರಮದಲ್ಲಿ ಕಾಲೇಜು ಮುಖ್ಯೋಪಾಧ್ಯಾಯರು ಹಾಗೂ ವಿಧ್ಯಾರ್ಥಿಗಳು ಸೇರಿ ಸುಮಾರು 300 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಯೋಜನಾ ನಿರ್ದೇಶಕರಾದ ಡಾ// ಎಮ್.ಕೃಷ್ಣರಾಜು, ಜಿಪಂ ಲೇಕ್ಕಾಧಿಕಾರಿಯಾದ ಗಂಗಾ ಹಿರೇಮಠ, ಭೀಮ್ಸ ನಿರ್ದೇಶಕರಾದ ಡಾ// ಅಶೋಕ ಶೆಟ್ಟಿ, ಜಿಲ್ಲಾ ವೈದ್ಯರಾದ ಡಾ// ಶಿಂಧೆ, ಇ.ಎಲ್.ಸಿ ನೋಡಲ್ ಅಧಿಕಾರಿ ಮಂಜುಳಾ ಪಾಟೀಲ, ರವಿ ಗಜ್ಜೂರ್, ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
#ECI #CEO_KARNATAKA #LOK_SABHA_ELECTION_2024 #SVEEP #MARATHON #ELC #DC_BELAGAVI #CEO_ZP_BELAGAVI #ಚುನಾವಣಾ_ಪರ್ವ_ದೇಶದ_ಗರ್ವ #ಮತದಾನಕ್ಕಿಂತ_ಇನ್ನೋಂದಿಲ್ಲ_ನಾನು_ಖಚಿತವಾಗಿ_ ಮತದಾನ_ಮಾಡುವೆ
error: Content is protected !!