23/12/2024
IMG-20240402-WA0007

ಬೆಳಗಾವಿ-೦೨:  ರೈತರ ಸಾಲ ಮನ್ನಾ, ಬರ ಪರಿಹಾರವನ್ನು ಘೋಷಿಸಿ   ಬರ ಸ್ಥಿತಿ ಹೆಚ್ಚಾಗಿದೆ, ರೈತರು ಸಂಕಷ್ಟದಲ್ಲಿದ್ದು ಈ ಹೊತ್ತಲ್ಲಿ ಚುನಾವಣೆ ಕಡೆಗೆ ಒಲುವ ತೋರುವುದನ್ನಷ್ಟೇ ಮಾಡದೇ ರೈತರ ಸಮಸ್ಯೆಗಳಿಗೆ ಸ್ಪಂದಿಸಿ,ಎಂದು ರಾಜ್ಯ ರೈತಸಂಘದಿಂದ ಮಂಗಳವಾರ ಚೆನ್ನಮ್ಮ ವೃತ್ತ ದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿತು.

ಸೂಕ್ತ ಸಮಯಕ್ಕೆ ಮಳೆ ಆಗದೇ ಇರುವುದರಿಂದ ಇದೀಗ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಭೂಮಿಯಲ್ಲಿ ಫಸಲು ಇಲ್ಲ, ಜನ ಜಾನುವಾರುಗಳಿಗೆ ಕುಡಿಯುವುದಕ್ಕೆ ನೀರಿನ ಕೊರತೆಯೂ ಆಗಿದೆ. ಹೀಗಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ರೈತರ ಬರ ಸಂಕಷ್ಟವನ್ನು ಬಗೆಹರಿಸಲು ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಮಂಗಳವಾರ ಬೆಳಗಾವಿಯಲ್ಲಿ ಪ್ರತಿಭಟಿಸಿತು.

ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಹೊರಟು ಪ್ರತಿಭಟಿಸಿತು. ಜೊತೆಗೆ ತೀರ ಬರದಿಂದಾಗಿ ರೈತರ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ರೈತರ ಸಾಲವನ್ನು ಮನ್ನಾಗೊಳಿಸಿ, ಭ್ರಷ್ಟರಿಗಾಗಿ ಆಡಳಿತ ಮಾಡಬೇಡಿ, ಫಸಲು ಕಳೆದುಕೊಂಡಿರುವ ರೈತರಿಗೆ ಪರಿಹಾರ ಘೋಷಿಸಿ ಎಂದು ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

 

error: Content is protected !!