ನೇಸರಗಿ-೩೧:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ವೀರಪ್ಪ ದೂ.ಹುದ್ದಾರ ಅವರು ಕಳೆದ 34 ವರ್ಷಗಳ ಸಾರಿಗೆ, ಸಾರ್ವಜನಿಕ ಸೇವೆ ಅಪಾರವಾದದು. ಅನಾರೋಗ್ಯದ ಸಮಯದಲ್ಲಿ ಸಾರಿಗೆ ಸೇವೆ ಮಾಡಲು ಹಪಹಪಿಸುತ್ತಿದ್ದರು ಮತ್ತು ನಿರ್ವಾಹಕ,ಸಂಚಾರ ಸಹಾಯಕ ನಿಯಂತ್ರಣ ಅಧಿಕಾರಿಯಾಗಿ,ತನಿಖಾ ದಳ ಬೆಳಗಾವಿಯಲ್ಲಿ ಸೇವೆ ಸಲ್ಲಿಸಿ ಇಲಾಖೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ರಾಜ್ಯ ಸಾರಿಗೆ ಬೈಲಹೊಂಗಲ ಘಟಕದ ವ್ಯವಸ್ಥಾಪಕರಾದ ಪ್ರಸಾದ ಆರ್.ವಸ್ತ್ರದಮಠ ಹೇಳಿದರು.
ಅವರು ಸಮೀಪದ ಮದನಭಾವಿ ಗ್ರಾಮದ ಸಾರಿಗೆ ಇಲಾಖೆಯಲ್ಲಿ ನಿವೃತ್ತರಾದ ವಿಭಾಗ ತನಿಖಾ ದಳದ ವೀರಪ್ಪ ಹುದ್ದಾರ ಅವರ ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಾದ ಬಿ ಜಿ.ಪುಡಕಲಕಟ್ಟಿ,ಎಂ ಡಿ.ಕೆಂಚರಾಮನಹಾಳ,ವಾಯ್ ಟಿ.ಬಾಗಾವಿ,ನೇಸರಗಿ ಸಂಚಾರ ನಿಯಂತ್ರಣ ಅಧಿಕಾರಿ ಶರಣು ಎಸ್. ಮೆಳಕುಂದಿ,ಮತ್ತು ಈರಣಗೌಡ ದೊಡ್ಡಗೌಡರ, ಸೋಮಪ್ಪ ಕೊಳದೂರ,ಬಸವಂತಪ್ಪ ಮುರ್ಕಿಭಾಂವಿ, ಕಾಂಗ್ರೆಸ್ ಮುಖಂಡ ಈರಪ್ಪ ಜಿರಲಿ,ಶಿವಲಿಂಗಪ್ಪ ಮದನಭಾವಿ, ಶಾಲಾ ಮುಖ್ಯೋಪಾಧ್ಯಾಯ ಶ್ರೀಮತಿ ಸರೋಜಾ ವೀ.ಹುದ್ದಾರ, ಸಾರಿಗೆ ಸಂಸ್ಥೆಯ ನೌಕರರು, ಸೇವಾ ನಿವೃತ್ತರ ಕುಟುಂಬದವರು,ಮದನಭಾವಿ ಗ್ರಾಮಸ್ಥರು ಉಪಸ್ಥಿತರಿದ್ದರು.