ಬೆಳಗಾವಿ-೩೧: ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ ಬೆಳಗಾವಿ ಪರಿವಾರ ವತಿಯಿಂದ ಹಮ್ಮಿಕೊಳ್ಳಲಾದ ಜಿತೋ ಅಹಿಂಸಾ ರನ್ ಮ್ಯಾರಾಥಾನ ಓಟ ಇಂದು ಬೆಳಗಾವಿಯಲ್ಲಿ ದಾಖಲೆಯನ್ನು ನಿರ್ಮಿಸಿದೆ.
ಭಾನುವಾರ ನಡೆದ ಕ್ಯಾಂಪ ಪ್ರದೇಶದಲ್ಲಿರುವ ವಿದ್ಯಾನಿಕೇತನ ಶಾಲಾ ಮೈದಾನದಲ್ಲಿ ಈ ಮ್ಯಾರಾಥಾನ ಓಟ ಪ್ರಾರಂಭಗೊಂಡಿತು. 3 ಕಿಮಿ. ಓಟ , 5 ಕಿಮಿ ಮತ್ತು 10 ಕಿಮಿ ಸ್ಪರ್ಧಾತ್ಮಕ ಓಟಗಳು ನಡೆದವು. ಒಟ್ಟಾರೆ ಈ ಮ್ಯಾರಾಥಾನ ಸ್ಪರ್ಧೆಯಲ್ಲಿ 2300 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಗೋಮಟೇಶ ವಿದ್ಯಾಪೀಠ ಅಧಿಷ್ಠಾತಾ ಸಂಜಯ ಪಾಟೀಲ, ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ, ಮ್ಯಾರಾಥಾನ ಓಟದ ಪ್ರಮುಖ ಪ್ರಾಯೋಜಕರಾದ ಶ್ರೀ ಆರ್ಥೊ ಮತ್ತು ಟ್ರಾಮಾ ಸೆಂಟರ್‌ನ ಡಾ. ದೇವೆಗೌಡ, ಓರಿಯನ್ ಸಂಸ್ಥೆಯ ತವನಪ್ಪ ಪಾಲಕರ, ಪ್ರದೀಪ ಹೊಸಮನಿ ಮೊದಲಾದ ಅತಿಥಿ ಗಣ್ಯರು ಮ್ಯಾರಾಥಾನ ಓಟಕ್ಕೆ ಚಾಲನೆ ನೀಡಿದರು.ಈ ಓಟದಲ್ಲಿ ಚಿಕ್ಕಮಕ್ಕಳು, ವಿದ್ಯಾರ್ಥಿಗಳು, ಯುವಕರು-ಯುವತಿಯರು ಮಹಿಳೆಯರು, ಹಿರಿಯ ನಾಗರಿಕರು ಭಾಗವಹಿಸಿದ್ದರು.
ಪ್ರಶಸ್ತಿ ಪ್ರದಾನ: ಜಿತೋ ಅಹಿಂಸಾ ರನ್ ಮ್ಯಾರಾಥಾನ ಓಟದಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ಸಮಾರಂಭದಲ್ಲಿ ಜಿತೋ ಅಧ್ಯಕ್ಷ ವೀರಧವಲ ಉಪಾಧ್ಯೆ ಅತಿಥಿಗಳನ್ನು ಸ್ವಾಗತಿಸಿದರು. ಜಿತೋ ಲೇಡಿಂಜ ವಿಂಗ ಅಧ್ಯಕ್ಷೆ ಮಾಯಾ ಜೈನ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕ ಸಂಜಯ ಪಾಟೀಲ, ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಕೆಕೆಜಿ ವಲಯ ಸಂಯೋಜಕ ಸಂತೋಷ ಪೋರವಾಲ ಅವರು ಮಾತನಾಡಿ, ಜಿತೋ ಸಂಸ್ಥೆಯ ಕೈಗೊಂಡ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ಮ್ಯಾರಾಥಾನ ಓಟದ ಪ್ರಾಯೋಜಕರಾದ ಡಾ. ದೇವೆಗೌಡ, ಪಾಲಕರ, ಪ್ರದೀಪ ಹೊಸಮನಿ, ಹಾಗೂ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಶಸ್ತಿ ವಿಜೇತರು: 10 ಕಿಮಿ ಓಟದಲ್ಲಿ 16-34 ಮಯೋಮಾನ ಪುರುಷ ವಿಭಾಗ ಪ್ರಥಮ ಸ್ಥಾನ – ಸುರೇಶ ಬಾಳೆಕುಂದ್ರಿ, 35-49 ಮಯೋಮಾನ ಪುರುಷ ವಿಭಾಗ ಪ್ರಥಮ ಸ್ಥಾನ – ವಿನಾಯಕ ಜಾಂಬೋಟಕರ, 50 ವರ್ಷ ಮೇಲ್ಪಟ್ಟ ಪುರುಷ ವಿಭಾಗ ಪ್ರಥಮ ಸ್ಥಾನ – ರಾಧಾಕೃಷ್ಣ ನಾಯ್ಡು, 16 ವರ್ಷದೊಳಗಿನ ವಯೋಮಾನ ಪುರುಷ ವಿಭಾಗ ಪ್ರಥಮ ಸ್ಥಾನ ಸಮರ್ಥ ಹಿರೇಮಠ,
5 ಕಿಮಿ ಓಟ 16-34 ಮಯೋಮಾನ ಪುರುಷ ವಿಭಾಗ ಪ್ರಥಮ ಸ್ಥಾನ – ಬಾಬು ಚೌಗುಲಾ, 35-49 ಮಯೋಮಾನ ಪುರುಷ ವಿಭಾಗ ಪ್ರಥಮ ಸ್ಥಾನ – ಅನಿಷ ಲುಕೆ, 50 ವರ್ಷ ಮೇಲ್ಪಟ್ಟ ಪುರುಷ ವಿಭಾಗ ಪ್ರಥಮ ಸ್ಥಾನ – ಚಂದ್ರಕಾAತ ಕಡೋಲಕರ ಹಾಗೂ 16 ವರ್ಷದೊಳಗಿನ ವಯೋಮಾನ ಪುರುಷ ವಿಭಾಗ ಪ್ರಥಮ ಸ್ಥಾನ ಯಶ ಗುಗ್ಗರಟ್ಟಿ ಇವರು ಪ್ರಶಸ್ತಿ ಪಡೆದುಕೊಂಡರು.
ಅದರಂತೆ 10 ಕಿಮಿ ಓಟ 16-34 ಮಯೋಮಾನ ಮಹಿಳಾ ವಿಭಾಗ ಪ್ರಥಮ ಸ್ಥಾನ – ವಿದುಲಾ ಜೈನ, 10 ಕಿಮಿ ಓಟ 35-49 ಮಯೋಮಾನ ಮಹಿಳಾ ವಿಭಾಗ ಪ್ರಥಮ ಸ್ಥಾನ –ಶೀತಲ ಎಸ್.ಕೆ., 16 ವರ್ಷದೊಳಗಿನ ವಯೋಮಾನ ಮಹಿಳಾ ವಿಭಾಗ ಪ್ರಥಮ ಸ್ಥಾನ – ನಿರವಿ ಕಲಕುಪ್ಪಿ, 5 ಕಿಮಿ ಓಟ 16-34 ಮಯೋಮಾನ ಮಹಿಳಾ ವಿಭಾಗ ಪ್ರಥಮ ಸ್ಥಾನ – ದಿವ್ಯಾ ಹೇರೆಕರ, 5 ಕಿಮಿ ಓಟ 35-49 ಮಯೋಮಾನ ಮಹಿಳಾ ವಿಭಾಗ ಪ್ರಥಮ ಸ್ಥಾನ- ಕಿರ್ತಿ ಮಲ್ಲಾಪೂರ,5 ಕಿಮಿ ಓಟ 50 ವರ್ಷ ಮೇಲ್ಪಟ್ಟ ಮಹಿಳಾ ವಿಭಾಗ ಪ್ರಥಮ ಸ್ಥಾನ – ರಾಜಶ್ರೀ ಬಾಳೋಜಿ ಹಾಗೂ 16 ವರ್ಷದೊಳಗಿನ ವಯೋಮಾನ ಮಹಿಳಾ ವಿಭಾಗ ಪ್ರಥಮ ಸ್ಥಾನ- ಸ್ನೇಹಾ ಹಿರೋಜಿ ಇವರು ಪ್ರಶಸ್ತಿ ಪಡೆದುಕೊಂಡರು.
ವೇದಿಕೆ ಮೇಲೆ ಮ್ಯಾರಾಥಾನ ಓಟದ ಬೆಳಗಾವಿ ವಲಯ ಸಂಯೋಜಕ ವಿಕ್ರಮ ಜೈನ, ಮ್ಯಾರಾಥಾನ ಸಂಯೋಜಕಿ ಕೀರ್ತಿ ದೊಡ್ಡಣ್ಣವರ, ಸಹ ಸಂಯೋಜಕಿ ಮಯೂರಾ ಪಾಟೀಲ, ಜಿತೋ ಯುಥ ವಿಂಗ ಅಧ್ಯಕ್ಷ ದೀಪಕ ಸುಬೇದಾರ, ಮೊದಲಾದವರು ಉಪಸ್ಥಿತರಿದ್ದರು. ಜಿತೋ ಲೇಡಿಜ ಕಾರ್ಯದರ್ಶಿ ಮಮತಾ ಜೈನ ವಂದಿಸಿದರು. ಅಭಯ ಆದಿಮನಿ ಕಾರ್ಯಕ್ರಮ ನಿರೂಪಿಸಿದರು.