ಬೆಳಗಾವಿ-೧೯: ಜೈನ ಇಂಟರ್‌ನ್ಯಾಷನ್‌ಲ ಟ್ರೆಡ ಆರ್ಗನೈಝೇಶನ ಜಿತೋ ಸಂಸ್ಥೆಯು ಜೈನ ಸಮಾಜದ ಸರ್ವಾಂಗೀಣ ಅಭಿವದ್ದಿಗಾಗಿ ಕಟ್ಟಿಬದ್ದವಾಗಿದ್ದು ಈಗಾಗಲೇ ಸಮಾಜದ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದೆ ಎಂದು ಜಿತೊ ಸಂಸ್ಥೆಯ ಅಪೆಕ್ಸ ಸದಸ್ಯ ಹಾಗೂ ಅಖಿಲ ಭಾರತ ಜೈನ ಅಲ್ಪಸಂಖ್ಯಾತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಲಲಿತ ಗಾಂಧಿ ಅವರು ಅಭಿಪ್ರಾಯಪಟ್ಟರು.
ರವಿವಾರದಂದು ಬೆಳಗಾವಿಯ ಮಿಲೇನಿಯಂ ಗಾರ್ಡನದಲ್ಲಿ ಜಿತೊ ಸಂಸ್ಥೆಯ 18 ನೇ ಸಂಸ್ಥಾಪನಾ ದಿನಾಚರಣೆಯ ಸಮಾರಂಭ ಹಾಗೂ ಸಮಾಜದ ಸಾಧಕರನ್ನು ಗೌರವಿಸುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿತೊ ಸಂಸ್ಥೆಯು ಕಳೆದ 18 ವರ್ಷಗಳಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದೆ. ಸಮಾಜದ ಮಧ್ಯಮ ಮತ್ತು ಬಡ ವರ್ಗದ ಜನರನ್ನು ಗುರುತಿಸಿ ಅವರಿಗೆ ಆರ್ಥಿಕ ನೆರವು ,ಶೈಕ್ಷಣಿಕ ನೆರವು, ಯುಪಿಎಸ್‌ಸಿ ಪರೀಕ್ಷೆಯ ಸಿದ್ದತೆಯ ಕಾರ್ಯಾಗಾರಗಳು, ವಸತಿ ನಿಲಯಗಳನ್ನು ನಿರ್ಮಿಸಿ ಸಮಾಜದ ವಿದ್ಯಾರ್ಥಿಗಳಿಗೆ ಉನ್ನತ ಶೀಕ್ಷಣ ನೀಡಲು ನೆರವಾಗುತ್ತ ಬಂದಿದೆ ಎಂದು ಅವರು ತಿಳಿಸಿದರು.
ಜೈನ ಸಮಾಜಕ್ಕೆ ರಾಷ್ಟ್ರೀಯ ಅಲ್ಪ ಸಂಖ್ಯಾತರ ಸ್ಥಾನ ಮಾನ ದೊರಕಿಸಿಕೊಡುವಲ್ಲಿ ಜಿತೊ ಸಂಸ್ಥೆ ಹಾಗೂ ಇನ್ನಿತರ ರಾಷ್ಟ್ರೀಯ ಸಂಸ್ಥೆಗಳು ಸಾಕಷ್ಟು ಶ್ರಮಿಸಿವೆ. ಹಾಗಾಗಿ ಜೈನ ಸಮಾಜಕ್ಕೆ ಅಲ್ಪ ಸಂಖ್ಯಾತರ ಯೋಜನೆಗಳು ಲಭ್ಯವಾಗಿವೆ. ಈ ಯೋಜನೆಗಳ ಲಾಭವನ್ನು ಸಮಾಜದ ಬಾಂಧವರು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.
ಇದೇ ಸಂಧರ್ಭದಲ್ಲಿ ಕೆಕೆಜಿ ವಲಯ ಅಲ್ಪ ಸಂಖ್ಯಾತರ ಸಂಯೋಜಕಿಯಾದ ಕವಿತಾ ಜೈನ ಅವರು ಮಾತನಾಡಿ, ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಜಿತೊ ಸಂಸ್ಥೆಯ ವತಿಯಿಂದ ಅಲ್ಪ ಸಂಖ್ಯಾತರ ಯೋಜನೆಗಳ ಕುರಿತು ಕೈಪಿಡಿಯನ್ನು ಹೊರತರಲಾಗಿದೆ. ಈ ಕೈಪಿಡಿಯಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಅಲ್ಪ ಸಂಖ್ಯಾತರಿಗೆ ನೀಡಿರುವ ಯೋಜನೆಗಳ ಕುರಿತು ಸಮಗ್ರ ಮಾಹಿತಿ ನೀಡಲಾಗಿದೆ. ಈ ಕೈಪಿಡಿ ಮುಖಾಂತರ ಜೈನ ಸಮಾಜದ ಬಾಂಧವರು ಅಲ್ಪ ಸಂಖ್ಯಾತರ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.
ಸಮಾರಂಭದಲ್ಲಿ ಜೈನ ಸಮಾಜದಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಯುವ ಸಾಧಕ ವಿಭಾಗದಲ್ಲಿ ಅಕ್ಷಯ ಕಟಾರಿಯಾ , ಸಮಾಜ ಸೇವೆ ವಿಭಾಗದಲ್ಲಿ ಪದ್ಮಪ್ರಸಾದ ಹೂಲಿ, ಅತ್ಯುತ್ತಮ ಶಿಕ್ಷಕ ವಿಭಾಗದಲ್ಲಿ ಮಿಥುನ ಶಾಸ್ತಿç, ಪ್ರಗತಿಪರ ರೈತ ವಿಭಾಗದಲ್ಲಿ ಐನಾಪೂರದ ಪ್ರೇಮನಾಥ ಉಗಾರೆ, ಯಶಸ್ವಿ ಉದ್ಯಮಿ ವಿಭಾಗದಲ್ಲಿ ತವನಪ್ಪ ಪಾಲಕರ, ಸಾಹಿತ್ಯ ಕ್ಸೇತ್ರದಲ್ಲಿ ಡಾ.ಪಿ.ಜಿ.ಕೆಂಪಣ್ಣವರ ಈ ಮಹನೀಯರನ್ನು ಈ ವರ್ಷದ ವಿಶೇಷ ಸಾಧಕರು ಎಂದು ಗುರುತಿಸಿ ಸನ್ಮಾನಿಸಲಾಯಿತು.
ಕೆಕೆಜಿ ವಿಭಾಗದ ಸಂಯೋಜಕ ಸಂತೋಷ ಪೋರವಾಲ, ಜಿತೊ ಲೇಡಿಜ ವಿಂಗ ಅಧ್ಯಕ್ಷೆ ಮಾಯಾ ಜೈನ, ಯುವ ವಿಭಾಗದ ಅಧ್ಯಕ್ಷ ದೀಪಕ ಸುಬೇದಾರ, ಬೆಳಗಾವಿ ವಿಭಾಗದ ಅಲ್ಪಸಂಖ್ಯಾತರ ವಿಭಾಗದ ಸಂಯೋಜಕ ಸಿದ್ದಾರ್ಥ ಪಾಟೀಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಜಿತೊ ಬೆಳಗಾವಿ ವಿಭಾಗದ ಅಧ್ಯಕ್ಷ ವೀರಧವಲ ಉಪಾಧ್ಯೆ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ರಾಜೇಶ ಭೋಸಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಶೋಕ ಕಟಾರಿಯಾ ಅತಿಥಿಗಳನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.