23/12/2024

ಬೆಳಗಾವಿ-28:  ಎರಡನೇ ರಾಜಧಾನಿಯಾಗಿ ಬೆಳೆಯುತ್ತಿರುವ ಬೆಳಗಾವಿಗೆ ಗುಣಮಟ್ಟದ ಸೇವೆಯ ಮೂಲಕ ಗೊಗಟೆ ಪರಿವಾರ  ಅನನ್ಯ ಕೊಡುಗೆ ನೀಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಗುರುವಾರ ಗೋಗಟೆ ಫ್ಲಾಜದಲ್ಲಿ ಪಿನ್ ಆ್ಯಂಡ್ ಲೇನ್ಸ್ – ಫನ್ ಝೋನ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಗೋಗಟೆ ಎಂದ ತಕ್ಷಣ ನಮಗೆಲ್ಲ ಕಾಲೇಜು, ಹೊಟೆಲ್ ನೆನಪಿಗೆ ಬರುತ್ತವೆ. ಅವುಗಳ ಗುಣಮಟ್ಟದಿಂದಾಗಿ ಜನರ ಮನಸ್ಸಿನಲ್ಲಿ ನೆಲೆಯೂರಿವೆ. ಬೆಳಗಾವಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಮಧ್ಯವರ್ತಿ ಸ್ಥಳದಲ್ಲಿದೆ. ಎಲ್ಲ ದೃಷ್ಟಿಯಿಂದ ಬೆಳೆಯಲು ಅವಕಾಶಗಳಿವೆ. ಅದಕ್ಕೆ ಸರಕಾರದಿಂದ ಏನೆಲ್ಲ ಸಹಕಾರ ನೀಡಬೇಕೋ ಅದನ್ನು ನೀಡಲು ಸಿದ್ಧರಿದ್ದೇವೆ. ಬೆಳಗಾವಿ ಜನರಿಗೆ ಮನರಂಜನೆ ಒದಗಿಸಲು ಫನ್ ಝೋನ್ ಆರಂಭಿಸಿರುವುದು ಪ್ರಶಂಸಾರ್ಹವಾಗಿದೆ ಎಂದು ಸಚಿವರು ಹೇಳಿದರು.

ಗೋಗಟೆ ಸಮೂಹದ ಚೇರಮನ್ ಆನಂದ ಗೋಗಟೆ, ಮ್ಯಾನೇಜಿಂಗ್ ಡೈರೆಕ್ಟರ್ ಮಾಧವ ಗೋಗಟೆ, ಖ್ಯಾತ ಚಲನಚಿತ್ರ ನಟ ರಿತೇಶ್ ದೇಶಮುಖ್,  ಬಹುಭಾಷಾ ನಟಿ  ಜೆನಿಲಿಯಾ ಡಿಸೋಜಾ ಮೊದಲಾದವರಿದ್ದರು. 

error: Content is protected !!