ಬೆಳಗಾವಿ-೧೫: ತಿಳಕವಾಡಿಯ ರಾಣಿ ಪಾರ್ವತಿದೇವಿ ಮಹಾವಿದ್ಯಾಲಯದ ಹತ್ತಿರ ಇರುವ ವೃತ್ತಕ್ಕೆ ರಾಜಾ ವೀರ ಮದಕರಿ ನಾಯಕರ ವೃತ್ತ ಎಂದು ನಾಮಕರಣ ಮಾಡಬೇಕೆಂದು ವೀರ ಮದಕರಿ ಘರ್ಜನೆ ಸಂಘ ಮಹಾನಗರ ಪಾಲಿಕೆಗೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ನಾಡಿನ ಮಹಾನ್ ವೀರ ಪುರಷರಲ್ಲಿ ರಾಜಾ ವೀರ ಮದಕಲಿ ಅಗ್ರಗಣ್ಯ ವ್ಯಕ್ತಿ. ಇತಿಹಾಸ ಪುರಷರ ಹೆಸರು ಸ್ಮರಣೆಯಲ್ಲಿರುವ ದೃಷ್ಠಿಯಿಂದ, ಅಭಿಮಾನಿಗಳ ನಾಲಿಗೆಯಲ್ಲಿ ನಿರಂತರ ಅವರ ಹೆಸರು ಉಲಿದಾಡಲು ಆರ್‌ಪಿಡಿ ಹತ್ತಿರ ಇರುವ ವೃತ್ತಕ್ಕೆ ಮದಕರಿಯ ನಾಮಕರಣ ಅಗತ್ಯ ಮತ್ತು ಸೂಕ್ತ ಎಂದು ಸಂಘ ಪಾಲಿಕೆಗೆ ಆಗ್ರಹಿಸಿತು.
ಪಾಲಿಕೆಗೆ ಮನವಿ ಸಲ್ಲಿಸಿದ ಆಗ್ರಹಿಸಿದ ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಮದಕರಿಯ ಅಭಿಮಾನಿಗಳು ಉಪಸ್ಥಿತಿರಿದ್ದರು.