ಬೆಳಗಾವಿ-೧೩: ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ. ಈಗಿನ ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮದೆಯಾದ ಚಾಪನ್ನು ಮೂಡಿಸಿದ್ದಾರೆ ಹಾಗೂ ಎಲ್ಲ ಸ್ತ್ರೀಯರ ಪಾತ್ರ ಕುಟುಂಬದಲ್ಲಿ ಅತೀ ಮುಖ್ಯ ವಾಗಿರುತ್ತದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ರವರು ಹೇಳಿದರು.
ನಗರದ ಹಳೆ ಜಿಪಂ ಸಭಾಭವನದಲ್ಲಿ ಬುಧವಾರ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಕುಟುಂಬದಲ್ಲಿ ಮಹಿಳೆಯರ ಪಾತ್ರವೂ ಬಹುಮುಖ್ಯವಾಗಿದ್ದು, ಎಲ್ಲ ಮಹಿಳೆಯರನ್ನು ಗೌರವಿಸಿ ಹಾಗೂ ಜಿಲ್ಲಾ ಪಂಚಾಯತಿ ಕಛೇರಿಯ ವಾತಾವರಣ ಒಂದೇ ಕುಟುಂಬದಂತೆ ಇರಬೇಕು ಎಂದು ಕಛೇರಿಯ ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ಮಾನ್ಯರು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಬಸವರಾಜ ಅಡವಿಮಠ ಉಪಕಾರ್ಯದರ್ಶಿ (ಅಭಿವೃದ್ಧಿ), ರೇಖಾ ಡೊಳ್ಳಿನವರ ಉಪಕಾರ್ಯದರ್ಶಿ (ಆಡಳಿತ), ಗಂಗಾಧರ ದಿವಟರ್ ಯೋಜನಾ ನಿರ್ದೇಶಕರು, ಜಯಶ್ರೀ ನಂದೆಣ್ಣವರ ಸಹಾಯಕ ನಿರ್ದೇಶಕರು, ಕಛೇರಿಯ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.