ಸಿಹಿ – ಕಹಿ ನೆನಪು ಸಾವಿರ ನೆನಪು’ ಕಾರ್ಯಕ್ರಮ
ಬದುಕಿಗೆ ಬಣ್ಣ ತುಂಬುವವಳೆ ಹೆಣ್ಣು : ನೀಲಗಂಗಾ ಚರಂತಿಮಠ
ಬೆಳಗಾವಿ -೧೦:ಅಜ್ಜಿ, ಅವ್ವ, ಅತ್ತಿಗೆ, ಮಡದಿ, ಮಗಳು ಹೀಗೆ ಹೆಣ್ಣು ಮನುಷ್ಯನ ಜೀವನದಲ್ಲಿ ಕಾಣಿಸಿಕೊಂಡು ಅತ್ಯಂತ ಪ್ರಮುಖ ಸ್ಥಾನ ವಹಿಸುತ್ತಾಳೆ. ಕಣ್ಣಿಗೆ ಕಾಣುವ ದೇವರೇ ತಾಯಿ ಎಂದು ಹೇಳುತ್ತಾರೆ. ಹೀಗೆ ಬದುಕಿಗೆ ಬಣ್ಣ ತುಂಬುವವಳೇ ಹೆಣ್ಣು ಎಂದು ಹಿರಿಯ ಲೇಖಕಿ ಶ್ರೀಮತಿ ನೀಲಗಂಗಾ ಚರಂತಿಮಠ ಅವರು ಇಂದಿಲ್ಲಿ ಹೇಳದರು.
ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ನಿನ್ನೆ ದಿ. ೯ ಶನಿವಾರದಂದು ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ನಿಮಿತ್ತ ವಿಶೇಷ ಕಾರ್ಯಕ್ರಮ ’ಸಿಹಿ – ಕಹಿ ನೆನಪು ಸಾವಿರ ನೆನಪು’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕ್ಕೊಂಡಿದ್ದರು ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಲೇಖಕಿ ಶ್ರೀಮತಿ ಚರಂತಿಮಠ ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತ ಶ್ರೀಮತಿ ಚರಂತಿಮಠ, ಅನ್ನಕ್ಕಾಗಿ ದುಡಿಯುವವರಿಗೆ ಮರ್ಯಾದೆ ಕೊಡುತ್ತಿರುವ ಸಮಾಜ ಅನ್ನ ಮಾಡುವವಳಿಗೆ ಗೌರವವಿಲ್ಲ. ಪ್ರತಿಭೇಯಿರುವ ಹೆಣ್ಣು ಮಕ್ಕಳು ಸಾಕಷ್ಟು ಇದ್ದಾರೆ ಆದರೆ ಅವರಿಗೆ ಸಿಗಬೇಕಾದ ಅವಕಾಶಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕಾರ್ಯಕ್ರದಲ್ಲಿ ಎರಡು ಸುತ್ತುಗಳಿದ್ದು ಮೊದಲು ಸುತ್ತಿನಲ್ಲಿ ಕಹಿ ನೆನಪುಗಳನ್ನು ಹಂಚಿಕೊಂಡ ಶ್ರೀಮತಿ ಸುನಿತಾ ದೇಸಾಯಿ, ಶ್ರೀಮತಿ ಕೀರ್ತಿ ಕಾಸರಗೋಡ, ಶ್ರೀಮತಿ ಸುಪ್ರಿಯಾ ದೇಶಪಾಂಡೆ, ಶ್ರೀಮತಿ ದೀಪಿಕಾ ಕುಲಕರ್ಣಿ, ಶ್ರೀಮತಿ ಭಾರತಿ ವಡವಿ ಇವರು ತಂದೆ-ತಾಯಿ, ಅತ್ತೆ-ಮಾವ, ಪತಿ-ಪತ್ನಿ ಹೀಗೆ ಮುಂತಾದವರ ಸಾವಿನ ಘಟನೆಗಳನ್ನೇ ಹಂಚಿಕೊಂಡರು. ಸಾವಿನ ಸುತ್ತಲೇ ಮೊದಲ ಸುತ್ತು ವರೆದಿತ್ತು. ತುಂಬ ಭಾವುಕರಾದ ಎಲ್ಲರ ಕಣ್ಣುಗಳು ತೇವಗೊಂಡವು. ಎರಡನೇ ಸುತ್ತಾದ ಸಿಹಿ ಸಂದರ್ಭಗಳನ್ನು ಹಂಚಿಕೊಳ್ಳುವಾಗ ಮೊದಲಿನ ನೋವಿನ ಪ್ರಸಂಗ ಗಳಿಂದ ಹೊರಬಂದು ವೇದಿಕೆ ಸಹಜ ಸ್ಥಿತಿಗೆ ಮರಳಿತು.
ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದ ಬಿ.ಎಸ್.ಎನ್.ಎಲ್. ನಿವೃತ್ತ ಅಧಿಕಾರಿ ಎಸ್ ವಿ ದೀಕ್ಷೀತ ಅವರು ಮಾತನಾಡುತ್ತ ನನ್ನ ಮಡದಿ ವಿಜಯಲಕ್ಷ್ಮಿ ಪ್ರತಿವರ್ಷ ಈ ತಿಂಗಳ ಪ್ರಾಯೋಜಕತ್ವವನ್ನು ವಹಿಸಿಕೊಳ್ಳತ್ತ ಬಂದಿದ್ದಳು. ಅವಳ ನಿಧನದ ನಂತರ ನಾನು ಮುಂದೆವರೆಸಿಕೊಂಡು ಬಂದಿದ್ದೇನೆ. ಅವಳು ನನ್ನನ್ನು ಅಗಲಿದ ದಿನ ನನಗೆ ಅತ್ಯಂತ ಕಹಿ ದಿನವಾಗಿದೆ ಎಂತು ಕಣ್ಣದುಂಬಿ ಹೇಳಿದರು.
ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ರಾಜೇಶ್ವರಿ ಹಿರೇಮಠ ನಿರೂಪಿಸಿದರು.