23/12/2024
IMG_20240306_195517
IMG 20240221 WA0004 3 -
ನೇಸರಗಿ-06:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿಸಿ ಟ್ರಸ್ಟ್ ಬೈಲಹೊಂಗಲ ತಾಲೂಕಿನ ನೇಸರಗಿ ವಲಯದ ಹಣಬರಹಟ್ಟಿ  ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಗ್ರಾಮ ಪಂಚಾಯತ್ ಸಹಬಾಗಿತ್ವದಲ್ಲಿ “624ನೇ ಹಣಬರಹಟ್ಟಿ ಕೆರೆ”  ಕೆರೆ ಹಸ್ತಾಂತರ ಕಾರ್ಯಕ್ರಮವನ್ನು   ಬುಧವಾರದಂದು ಶ್ರೀ ಬಸವಲಿಂಗ ಮಹಾಸ್ವಾಮಿಗಳು ಜ್ಯೊತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕೆರೆಯ ಹಸ್ತಾಂತರವನ್ನು ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಗಾವಿ – 01 ಇದನ್ನು  ಜಿಲ್ಲಾ ನಿರ್ದೇಶಕರಾದ  ಸತೀಶ್ ನಾಯ್ಕ್ ಅವರು ಕೆರೆ  ಹಸ್ತಾಂತರ ಮಾಡುವ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ ಹಮ್ಮಿಕೊಳ್ಳುವ ಜನಮಂಗಲ ಕಾರ್ಯಕ್ರಮ, ಶಾಲಾ ಕಟ್ಟಡ, ಕೆರೆ ಹೂಳಿತ್ತುವ ಬಗ್ಗೆ ಆರೋಗ್ಯ ರಕ್ಷಾ, ಸಂಪೂರ್ಣ ಸುರಕ್ಷಾ, ಶಿಷ್ಯವೇತನ, ಕೃಷಿ ಅನುದಾನ ಕಾರ್ಯಕ್ರಮ, ಜ್ಞಾನವಿಕಾಸ  ಕಾರ್ಯಕ್ರಮದ ಅಡಿಯಲ್ಲಿ ವಾತ್ಸಲ್ಯಮನೆ ರಚನೆ, ನಿರ್ಗತಿಕರ ಮಾಶಾಸನ  ಬಗ್ಗೆ ಸವಿಸ್ತಾರವಾದ ಮಾಹಿತಿ ಕೊಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಯುವ ಮುಖಂಡರು,ನೇಗಿನಹಾಳ ಪಿಕೆಪಿಎಸ್ ಅದ್ಯಕ್ಷರಾದ ನಾನಾಸಾಹೇಬ ಪಾಟೀಲ, ಜಾಗೃತಿಯ ಜಿಲ್ಲಾ ಅದ್ಯಕ್ಷರಾದ ಬಸವರಾಜ್ ಸೂಪ್ಪಿಮಠ  ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ  ಸುನಂದ, ಕೆರೆ ಸಮಿತಿ ಅಧ್ಯಕ್ಷರು ರಮೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ನಿಂಗಪ್ಪ.ತಳವಾರ, ಬೈಲಹೊಂಗಲ ತಾಲೂಕಿನ ಯೋಜನಾಧಿಕಾರಿ ವಿಜಯ್ ಕುಮಾರ್, ಕೆರೆ ಅಭಿಯಂತರರು ನಿಂಗರಾಜ್ , ಕೃಷಿ ಮೇಲ್ವಿಚಾರಕ ರವಿ ಆರ್ ಗೊಂಡ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶೈಲಾ, ವಲಯದ ಮೇಲ್ವಿಚಾರಕಿ ಕವಿತಾ ಹಾಗೂ ಸರ್ವ ಸದಸ್ಯರು, ಸೇವಾ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
error: Content is protected !!