23/12/2024
IMG-20240305-WA0002

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ೨೩ನೇ ಘಟಿಕೋತ್ಸವ ಭಾಗ-೨

IMG 20240221 WA0004 3 -

ಬೆಳಗಾವಿ-05: ಉನ್ನತ ವ್ಯಾಸಂಗದ ಜೊತೆಗೆ ಔದ್ಯೋಗಿಕ ಕ್ಷೇತ್ರದಲ್ಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಪದವೀಧರರಿಗೆ ಪದವಿ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ವಿಳಂಭವನ್ನು ತಪ್ಪಿಸುವ ಸದುದ್ದೇಶದೊಂದಿಗೆ ವಿಶ್ವವಿದ್ಯಾಲಯದ ೨೩ನೇ ಘಟಿಕೋತ್ಸವ ಭಾಗ-೨ನ್ನು ಮಾ.೭ ರಂದು ಆಯೋಜಿಸಲಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎಸ್.ವಿದ್ಯಾಶಂಕರ ನುಡಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸೆನೆಟ್ ಹಾಲನಲ್ಲಿ ಮಂಗಳವಾರ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಾರ್ಚ ೭ ರಂದು ಜರುಗಲಿರುವ ೨೩ನೇ ಘಟಿಕೋತ್ಸವ ಭಾಗ-೨ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್, ರಾಜ್ಯ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ.ಸುಧಾಕರ ಅವರು ಆಗಮಿಸಿಲಿದ್ದು ರಾಮನ್ ಮಾಗ್ಸಸ್ಸೇ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಹರೀಶ್ ಹಂದೆ ಅವರು ಘಟಿಕೋತ್ಸವದ ಭಾಷಣ ಮಾಡುವರು ಎಂದು ತಿಳಿಸಿದರು.ಪದವಿ ವಿಧ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಪ್ರಸಕ್ತ ಸಾಲಿನಿಂದಲೇ ೨ನೇ ಘಟಿಕೋತ್ಸವನ್ನು ಆಯೋಜಿಸಲಾಗುತ್ತಿರುವದು ರಾಜ್ಯದಲ್ಲಿಯೇ ಪ್ರಥಮವಾಗಿದೆ. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರಯತ್ನ ಪಡುವ ವಿಧ್ಯಾರ್ಥಿಗಳ ಪ್ರವೇಶ ಪ್ರöಕ್ರಿಯೆಯಲ್ಲಿ ಯಾವುದೇ ವಿಳಂಭ, ಅಡೆತಡೆಗಳನ್ನು ಎದುರಿಸಬಾರದು ಎಂಬ ಸದುದ್ದೇಶದೊಂದಿಗೆ ಅಂತರಾಷ್ಟಿçÃಯ ಶೈಕ್ಷಣಿಕ ಕ್ಯಾಲೆಂಡರನೊAದಿಗೆ ವಿ.ಟಿ.ಟಯು ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಸರಿ ಹೊಂದುವAತೆ ಮಾಡಿ ದಾಖಲೆ ಸಮಯದಲ್ಲಿ ಪರೀಕ್ಷಾ ಫಲಿತಾಂಶವನ್ನು ನೀಡಲಾಗುತ್ತಿದೆ.ವಿಶ್ವವಿದ್ಯಾಲಯದ ೨೩ನೇ ಘಟಿಕೋತ್ಸವ (ಭಾಗ-೨) ಸಮಯದಲ್ಲಿ ಎಂ.ಬಿ.ಎ.೪೫೧೪, ಎಂ.ಸಿ.ಎ.೪೦೨೪, ಎಂ.ಟೆಕ್ ೯೨೦, ಎಂ.ಆರ್ಚ ೪೪, ಎಂ.ಪ್ಲಾನ್ ೨೭, ಹಾಗೂ ಸಂಶೋಧನಾ ಪದವಿಗಳಾದ ಪಿ.ಎಚ್.ಡಿ ೬೬೭, ಎಂ.ಎಸ್ಸಿ (ಎಂಜಿನಿಯರಿAಗ)-೦೨, ಹಾಗೂ ಇಂಟಿಗ್ರೇಟೆಡ್ ಡುಯಲ್ ಡಿಗ್ರಿ ಟು ರಿಸರ್ಚ ೨ ಪದವಿಗಳನ್ನು ನೀಡಲಾಗುತ್ತಿದೆ ಎಂದರು.ಚಿನ್ನದ ಪದಕ ವಿಜೇತರು: ಬೆಂಗಳೂರಿನ ಆಯ್.ಸಿ.ಎಂ.ಆರ್ ಇನ್ಸಟಿಟ್ಯೂಟ್ನ ತನು ಜಿ ೪, ಹುಬ್ಬಳ್ಳಿಯ ಕೆ.ಎಲ್.ಇ. ಇನ್ಸಟ್ಯೂಟ್ ಆಫ್ ಟೆಕ್ನಾಲಾಜಿಯ ಅಕ್ಷತಾ ಎಸ್. ನಾಯ್ಕ ೩, ದಾವಣಗೆರೆಯ ಪೂಜಾ ಎಂ. -೩, ಬೆಳಗಾವಿ ಎಸ್.ಜಿ.ಬಾಳೇಕುಂದ್ರಿ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಕ್ರಾಂತಿ ಉತ್ತಮ ಮೋರೆ-೨, ಚಿಕ್ಕಮಗಳೂರಿ ಆದಿಚುಂಚನಗಿರಿ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಚೇತನ ಎಚ್.ಪಿ,-೨, ಹಾಗೂ ದಾವಣಗರೆಯ ಯು.ಬಿ.ಡಿ.ಟಿ ಕಾಲೇಜಿನ ನಿತ್ಯಾ ಎ.ಎಸ್-೨ ಸೇರಿದಂತೆ ಒಟ್ಟು ೧೬ ಚಿನ್ನದ ಪದಕಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಕುಲಸಚಿವರುಗಳಾದ ಪ್ರೊ ಟಿ.ಎಸ್.ಶ್ರೀನಿವಾಸ, ಪ್ರೋ.ಬಿ.ಈ.ರಂಗಸ್ವಾಮಿ ಉಪಸ್ಥಿತರಿದ್ದರು.

error: Content is protected !!