ಬೆಳಗಾವಿ-01: ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದು ವಿವಾದಿತ ಹಾಗೂ ಎಂ.ಎಸ್.ಪಿ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ರಾಜ್ಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಗರದ ರೈಲ್ವೆ ನಿಲ್ದಾಣ ಎದುರು ಪ್ರತಿಭಟಿಸಿ, ರೈಲ್ವೆ ಅಧಿಕಾರಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ನಡೆಸಿದ ರೈತ ಸಂಘದ ಕಾರ್ಯಕರ್ತರು ಕೇಂದ್ರ ಸರಕಾರ ಈ ಕೂಡಲೇ ಎಚ್ಚೆತ್ತುಕೊಂಡು ದೇಶದ ಎಲ್ಲ ರೈತರಿಗೆ ಅನುಕೂಲವಾಗುವಂತೆ ಡಾ.ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ತರುವುದು ಮತ್ತು ಎಮ.ಎಸ್.ಪಿ ಕಾಯಿದೆಯನ್ನು ಕಾನೂನು ಬದ್ಧಗೊಳಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಮಾತನಾಡಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗು ಭಾರತದಲ್ಲಿ ರೈತರು ಬೆಳೆದಂತಹ ಬೆಳೆಗಳಿಗೆ ನ್ಯಾಯ ಸಮ್ಮತವಾದ ಬೆಲೆ ಕೊಡಿಸುವಲ್ಲಿ ದೇಶದ ಬಹುತೇಕ ಸರಕಾರಗಳು ವಿಫಲವಾಗಿದ್ದು,ಆದರೆ 2013-14 ರ ಚುಣಾವಣೆಯಲ್ಲಿ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ತಮ್ಮ ಪ್ರಥಮ ಆದ್ಯತೆಯನ್ನು ರೈತರಿಗಾಗಿ, ರೈತರ ಅನುಕೂಲಕ್ಕಾಗಿ ಕೊಡುತ್ತೇನೆಂದು ಭರವಸೆಯನ್ನು ಕೊಟ್ಟು ಸುಮಾರು ಹತ್ತು ವರ್ಷ ಕೇಂದ್ರ ಸರಕಾರದ ಚುಕ್ಕಾಣಿಯನ್ನು ಹಿಡಿದರೂ ಕೂಡಾ ಸ್ವಲ್ಪವೂ ರೈತರ ಹಿತಾಸಕ್ತಿ ಕಡೆಗೆ ಗಮನ ಹರಿಸದೆ ಕೇವಲ ಕಾರ್ಪೋರೇಟ ಕಂಪನಿಗಳ ಗುಲಾಮರಂತೆ ವರ್ತಿಸುತ್ತಿದೆ ಎಂದು ಹರಿಹಾಯ್ದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಧರ್ಮರಾಜ ಗೌಡರ, ಸುರೇಶ ಸಂಪಗಾವ, ಮಲ್ಲಿಕಾರ್ಜುನ ಹುಂಬಿ, ಎಸ್. ಬಿ. ಸಿದ್ನಾಳ, ಬಾಪುಗೌಡ ಪಾಟೀಲ ಸೇರಿದಂತೆ ಉಪಸ್ಥಿತಿರಿದ್ದರು.