ಬೆಳಗಾವಿ-29: ಇಲ್ಲಿಯ ಭರತೇಶ ಶೀಕ್ಷಣ ಸಂಸ್ಥೆಯ ಜೆಜಿಎನ್‌ಡಿ ಭರತೇಶ ವಾಣೀಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಇತ್ತಿಚಿಗೆ ಇನ್ಸಿಟ್ಯೂಟ್ ಆಫ್ ಚಾಟರ್ಡ ಅಕೌಂಟಂಟ ಆಫ್ ಇಂಡಿಯಾ ಅವರು ಆಯೋಜಿಸಿದ ಹಾಗೂ ಚಾಟರ್ಡ ಆಕೌಂಟಂಟ ಫೌಂಡೇಶನ ವತಿಯಿಂದ ನಡೆಸಲಾಗುವ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ.
ಬಿಕಾಂ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಅಂಕಿತಾ ನಾನಾಮುತ್ತಿ ಮತ್ತು ರಾಧಾ ವೀರಗೌಡರ ಇವರು ಚಾಟರ್ಡ ಆಕೌಂಟಂಟ ಫೌಂಡೇಶನ ಪರೀಕ್ಷೆಯಲ್ಲಿ ಸಾಧನೆಗೈದಿದ್ದಾರೆ, ಅದರಂತೆ ಇನ್ಸಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ ಆಪ್ ಇಂಡಿಯಾ ಆಯೋಜಿಸಿದ ಹಾಗೂ ಕಂಪನಿ ಸೆಕ್ರೆಟರಿ ಫೌಂಡೇಶನ ವತಿಯಿಂದ ನಡೆಸಲಾಗುವ ಪರೀಕ್ಷೆಯಲ್ಲಿ ಸುಹಾನಿ ಪಾಟೀಲ ವಿದ್ಯಾರ್ಥಿನಿ ಅತ್ಯುತ್ತಮ ಸಾಧನೆಗೈದಿದ್ದಾರೆ. ಈ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಭರತೇಶ ಆಡಳಿತ ಮಂಡಳಿ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.