ಬೆಳಗಾವಿ-29:ಸರಕರಿ ಆದೇಶದಂತೆ ವಾಣಿಜ್ಯ ಮಳಿಗೆಗಳು ಹಾಗೂ ಅಂಗಡಿಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಇರಬೇಕೆಂದು ರಾಜ್ಯ ಸರಕಾರ ನೀಡಿದ ಆದೇಶದ ಗಡುವು ಮುಗಿದರೂ ಕೂಡಾ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ಮಾಡಿಲ್ಲ ಎಂದು ಆರೋಪಿಸಿ ಕರುನಾಡು ವಿಜಯಸೇನೆ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರಕಾರದ ವಿರುದ್ಧ ಘೋಷಣೆ ಮೊಳಗಿಸಿದ ಕನ್ನಡ ಪರ ಹೋರಾಟಗಾರರು(ಕರುನಾಡು ವಿಜಯಸೇನೆ)ಸಂಘದವರು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿ ನಗರದ ಸಮಾದೇವ ಗಲ್ಲಿಯ ಮಾರುತಿ ದೇವಸ್ಥಾನ ಎದುರುಗಡೆ ಇರುವ ಸಂಯುಕ್ತ ಮಹಾರಾಷ್ಟ್ರ ಚೌಕ ಎಂಬ ನಾಮಫಲಕ , ಅನಗೋಳ ಸೇರಿದಂತೆ ವಿವಿಧಡೆ ಮಹಾರಾಷ್ಟ್ರ ಬಾಷೆ ನಾಮಫಲಕಗಳ ಇದ್ದು, ತಕ್ಷಣ ಅವುಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಸರಕಾರದ ಗಡವು ಮುಗಿದಿದ್ದರೂ ಕೂಡ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿರುವುದಿಲ್ಲ ಒಂದು ವೇಳೆ ಕಾರ್ಯಾಚರಣೆ ಕೈಗೊಂಡಿದ್ದರೆ ಅದರ ಸಂಪೂರ್ಣ ಮಾಹಿತಿಯನ್ನು ನಮಗೆ ಲಿಖಿತ ರೂಪದಲ್ಲಿ ನೀಡಿ ಎಂದು ಕನ್ನಡ ಪರ ಹೋರಾಟಗಾರರು ಆಗ್ರಹಿಸಿದರು.