23/12/2024
IMG-20240224-WA0101
ಬೆಳಗಾವಿ.ಕಳೆದ 2 ದಶಕಗಳಿಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷದಲ್ಲಿ ಸೇವೆಸಲ್ಲಿಸುತ್ತಾ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದ ಎಫ್‌ಎಸ್.ಸಿದ್ದನಗೌಡರ ಇಂದು ರಾಜ್ಯ ಬಿಜೆಪಿ ಮಾಧ್ಯಮ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
  ಕಳೆದ 4ವರ್ಷಗಳಿಂದ ಜಿಲ್ಲಾ ಮಾಧ್ಯಮ ಸಂಚಲಕರಾಗಿ ರಾಜ್ಯದಲ್ಲಿಯೆ ಅತ್ಯತ್ತಮವಾಗಿ ಜವಾಬ್ದಾರಿ ನಿಭಾಯಿಸಿದ್ದ ಇವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ತಂಡದಲ್ಲಿ‌ ಉತ್ತರ ಕರ್ನಾಕದ 54 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆಯುದ್ದಕ್ಕೂ ಸಂಚರಿಸಿ ರಾಜ್ಯ ಬಿಜೆಪಿ ಮಾಧ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದರು. ಜಿಲ್ಲೆಯಲ್ಲಿ ಬಿಜೆಪಿಯ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಪಕ್ಷದಲ್ಲಿ ಮಾಡಿದ ಸೇವಾಕಾರ್ಯಗಳನ್ನು ರಾಜ್ಯ ಬಿಜೆಪಿ ಪರಿಗಣಿಸಿ ಜಿಲ್ಲೆಯ ಪದಾಧಿಕಾರಿಯಾಗುವ ಇವರ ಕನಸ್ಸನ್ನು ರಾಜ್ಯ ಪದಾಧಿಕಾರಿಯಾಗಿ ಮಾಡುವಂತೆ ಮಾಡಿದೆ. ಇವರ ಆಯ್ಕೆಗೆ ಜಿಲ್ಲೆ ಮತ್ತು ರಾಜ್ಯದಿಂದ ಪಕ್ಷದ ಕಾರ್ಯಕರ್ತರು ಅಭಿನಂದನೆಗಳ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ‌ಮಾತನಾಡಿ, ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ‌ ಸದಸ್ಯ ಸ್ಥಾನ ಬೆಳಗಾವಿ ಜಿಲ್ಲೆಗೆ ಪ್ರಥಮವಾಗಿ ಒಲಿದು ಬಂದಿದ್ದು ಈ ಗುರುತರ ಜವಾಬ್ದಾರಿಯಲ್ಲಿ ಎಫ್.ಎಸ್.ಸಿದ್ದನಗೌಡರ ಯಶಸ್ವಿಯಾಗಲೆಂದರು. ನಿಕಟ ಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಮುರಘೇಂದ್ರಗೌಡ ಪಾಟೀಲ‌ ಮಾತನಾಡಿ, ರಾಜ್ಯ ಬಿಜೆಪಿ ಘಟಕ ಜಿಲ್ಲೆಗೆ ಹೆಚ್ಚಿನ ರಾಜ್ಯ ಪದಾಧಿಕಾರಿಗಳ ಸ್ಥಾನಮಾನ ನೀಡಿದ್ದು ಬರುವ ಲೊಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅತ್ಯಂತ ಅಧಿಕ‌ಮತಗಳ ಅಂತರದಿಂದ ಗೆಲವು ಸಾಧಿಸಲು ಕಾರ್ಯಕರ್ತರ ಸಹಕಾರದೊಂದಿಗೆ ಪದಾಧಿಕಾರಿಗಳು ಹೆಚ್ಚಿನ ಶ್ರಮವಹಿಸೋಣ ಎಂದರು.
_________________
IMG 20240221 WA0004 2 -
*ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ
ಸತ್ಕಾರ ಸ್ವೀಕರಿಸಿ ಮಾತನಾಡಿ, ಬಿಜೆಪಿಯಲ್ಲಿ ಶ್ರಮವಹಿಸಿ ಕೆಲಸ ಮಾಡುವ ಕಾರ್ಯಕರ್ತರನ್ನು ಗುರುತಿಸಿ ಪಕ್ಷದ ಹಿರಿಯರು ರಾಜ್ಯಮಟ್ಟದ  ಜವಾಬ್ದಾರಿ ನೀಡಿದ್ದು ಪಕ್ಷ ಸಂಘಟನೆಗಾಗಿ ಹಗಲಿರಳು ಶ್ರಮಿಸುವದಾಗಿ ಹೇಳಿದರು.
ಸಾಮಾಜಿಕ ಜಾಲತಾಣದ ರಾಜ್ಯ ಪದಾಧಿಕಾರಿಯಾಗಿ ಆಯ್ಕೆಯಾದ ನೀತಿನ‌ ಚೌಗಲೆಯವರನ್ನು ಸತ್ಕರಿಸಲಾಯಿತು.
ಡಾ.ಕೆ.ವಿ.ಪಾಟೀಲ, ದಾದಾಗೌಡ ಬಿರಾದಾರ, ವಿಜಯ ಗುಡದರಿ, ವಿಠಲ ಸಾಯಣ್ಣವರ, ಮಹಾಂತೇಶ ಚಿನ್ನಪ್ಪಗೌಡರ, ಮಂಜುನಾಥ ಪಮ್ಮಾರ,  ವೀರಭದ್ರ ಪೂಜಾರ, ಯಲ್ಲೇಶ ಕೊಲಕಾರ, ಮಹಾಂತೇಶ ಹೊಸಗೌಡ್ರ ಮುಂತಾದವರ ಉಪಸ್ಥಿತಿ ರಿದ್ದರು.
error: Content is protected !!