ಧಾರವಾಡ:24:ಕರ್ನಾಟಕದ ಪ್ರತಿಷ್ಠಿತ ಸ್ಪರ್ಧಾತ್ಮಕ ತರಬೇತಿ ಕೇಂದ್ರವಾದ ಧಾರವಾಡದ ರಜತಗಿರಿಯ ಎಕ್ಸಲಂಟ್ ಕೋಚಿಂಗ್ ಕ್ಲಾಸಿನ ವಿದ್ಯಾರ್ಥಿ ಶಶಿಕಾಂತ ಗಸ್ತಿ (ರೊಲ್ ನಂಬರ 632040) ಪರೀಕ್ಷೆಯಲ್ಲಿಯೇ ಅತೀ ಕಠಿಣ ಪರೀಕ್ಷೆಯಾದ (RMS) ರಾಷ್ಟ್ರೀಯ ಮಿಲಿಟರಿ ಶಾಲೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಂಸ್ಥೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.
ಇವನಿಗೆ ತರಬೇತಿ ನೀಡಿದ ಪ್ರಾಂಶುಪಾಲ ಹಾಗೂ ಎಕ್ಸಲಂಟ್ ಕೋಚಿಂಗ್ ಕ್ಲಾಸಿನ ಸಂಸ್ಥಾಪಕ ಕಾರ್ಯದರ್ಶಿ ಸತೀಶ ಜಾಧವ ಹಾಗೂ ಅವರ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ವಿದ್ಯಾರ್ಥಿಯನ್ನು ಅಭಿನಂದಿಸುವುದರ ಜೊತೆಗೆ ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ ಹಾಗೂ ನಿರ್ದೇಶಕ ಪ್ರವೀಣ ಗಿರಿಯಪ್ಪನವರ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.