ಬೆಳಗಾವಿ-24: ಎಐಸಿಸಿ ಅಲ್ಪಸಂಖ್ಯಾತರ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ ಇಮ್ರಾನ್ ಪ್ರತಾಪಗಡಿ ಹಾಗೂ ರಾಜ್ಯ ಉಸ್ತುವಾರಿ ಶ್ರೀಮತಿ ಜಿನಲ್ ಗಾಲಾ ಇವರು ಬೆಳಗಾವಿಯ ನಿಷ್ಠಾವಂತ ಕಾರ್ಯಕರ್ತ, ಪ್ರಖ್ಯಾತ ಸಮಾಜ ಸೇವಕರಾದ ಜನಾಬ್ ಶಾಹನವಾಜ ಮುಲ್ಲಾ ಇವರನ್ನು ಮೂರನೇಯ ಅವಧಿಗೆ ರಾಜ್ಯ ಉಪಾಧ್ಯಕ್ಷರಾಗಿ ಮರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಇದೊಂದು ಪ್ರಾಮಾಣಿಕ ಕಾರ್ಯಕರ್ತರಿಗೆ ಸಂದ ಗೌರವ. ಇವರ ಅಭಿಮಾನಿಗಳು ಹಾಗೂ ಹಿತಚಿಂತಕ ರಿಂದ ಅಭಿನಂದನೆಗಳು ವ್ಯಕ್ತವಾಗುತ್ತಿದೆ.