23/12/2024
IMG-20240212-WA0001

ಹುಬ್ಬಳ್ಳಿ-12:ಚಾಮುಂಡೇಶ್ವರಿ ನಗರದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಶ್ರಯದಲ್ಲಿ ಇತ್ತೀಚೆಗೆ ರುಡಾ ಸಂಸ್ಥೆಯ ವತಿಯಿಂದ ಮಹಿಳೆಯರಿಗಾಗಿ ನಡೆಸಲ್ಪಡುತ್ತಿರುವ ಉಚಿತ ಟೈಲರಿಂಗ್ ತರಬೇತಿ ಶಿಬಿರವನ್ನು ಉದ್ಘಾಟಿಸಲಾಯಿತು. ಸುಮಾರು 125 ಜನ ಮಹಿಳೆಯರು ಪ್ರಯೋಜನ ಪಡೆಯಲಿರುವ 45 ದಿನಗಳ ಈ ತರಬೇತಿ ಶಿಬಿರದಲ್ಲಿ ನುರಿತ ತರಬೇತಿದಾರರಿಂದ ಅಳತೆ, ಕಟಿಂಗ್, ಹೋಳಿಗೆ ಮಷೀನ್ ಉಪಯೋಗಿಸಿ ಸ್ವಿಚಿಂಗ್ ಮುಂತಾದ ತರಬೇತಿ ನಡೆಯಲಿದ್ದು, ತರಬೇತಿ ಪೂರ್ಣಗೊಳಿಸಿದವರಿಗೆ ಧೃಢೀಕೃತ ಪ್ರಮಾಣಪತ್ರ ಮತ್ತು ಸ್ವಂತ ಉದ್ಯೋಗ ಪ್ರಾರಂಭಿಸಲು ಮಾರ್ಗದರ್ಶನ ನೀಡಲಾಗುವುದು ಎಂದು ರುಡಾ ಸಂಸ್ಥೆಯ ಮುಖ್ಯಸ್ತರಾದ ರವಿಕುಮಾರ ತಿಳಿಸಿದರು.

ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಸಿದ್ದಣ್ಣ ಮೊಗಲಿಶೆಟ್ಟರ್ ಮತ್ತು ಕ.ಕೊ.ಅ ಮಂಡಳಿಯ ವಿ ಆರ್ ಶಿರೂರ್ ಆಗಮಿಸಿದ್ದರು, ಈ ಸಂದರ್ಭದಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶೈಲಜಾ ಎಂ ಕಲ್ಲೆದ ಮತ್ತು ಚಾಮುಂಡೇಶ್ವರಿ ನಗರದ ಅಧ್ಯಕ್ಷರಾದ ಪರಶುರಾಮ ಮಲ್ಯಾಳ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೊಂಡಪಲ್ಲಿ, ಖಜಾಂಚಿ ಸುರೇಶ ಸೌದುಲ್, ಉಪಾಧ್ಯಕ್ಷರಾದ ವೆಂಕಟೇಶ ಕೊಂಡಪಲ್ಲಿ, ಹಿರಿಯ ಪಂಚರಾದ ಮುತ್ಯಾಲಪ್ಪ ಪೆನುಗೋಲ, ನರಸಪ್ಪ ಮಾದರ, ಶ್ರೀ ವೆಂಕಟೇಶ ಕೊಲಗೊಂಡ, ಶ್ರೀರಾಮುಲು ಭಂಢಾರಿ, ಕುಲ್ಲಾಯಪ್ಪ ಮಂತ್ರಿ, ಆನಂದ ಮಾದರ, ನರಸಿಂಹ ವೆಪಚಾರಲ ಮುಂತಾದವರು ಉಪಸ್ಥಿತರಿದ್ದರು.

error: Content is protected !!