23/12/2024
IMG-20240212-WA0000
ಬೆಳಗಾವಿ-12:ಇಂದಿನ ಬಹುಭಾಷಾ ಹಾಸ್ಯಗೋಷ್ಠಿಯಲ್ಲಿ ಕನ್ನಡ, ಹಿಂದಿ, ಇಂಗ್ಲೀಷ, ಮರಾಠಿ, ಉರ್ದು ಐದು ಭಾಷೆಗಳಲ್ಲಿ ಜನರು ತಮ್ಮ  ರಸಪ್ರಸಂಗಗಳನ್ನು ಹಂಚಿಕೊಂಡರು. ಎಲ್ಲ ಭಾಷೆಗಳಿಗೂ  ಸಂತೋಷದಿಂದ ಕೇಕೆ ಹಾಕಿ ಪ್ರತಿಕ್ರಿಯೆ ನೀಡಿದ್ದು ಮಾತ್ರ  ಒಂದೇ ಭಾಷೆಯಿಂದ ಅದು  ನಗೆ. ನಗೆಗೆ ಭಾಷೆಯೆಂಬುದಿಲ್ಲ ಎಂದು ಹಿರಿಯ ಕವಿ ಪ್ರೊ. ಎಂ.ಎಸ್. ಇಂಚಲ  ಹೇಳಿದರು.
ಮುಂದೆ ಮಾತನಾಡುತ್ತ ಪ್ರೊ. ಇಂಚಲ ಅವರು  ಬಹುಭಾಷಾ ಕಾವ್ಯ ಗೋಷ್ಠಿಗಳು ಸರ್ವೇ ಸಾಮಾನ್ಯ ಆದರೆ ಬಹುಭಾಷಾ ಹಾಸ್ಯಗೋಷ್ಠಿ ಕೇಳಿರಲಿಲ್ಲ. ಗುಂಡೇನಟ್ಟಿ ಮಧುಕರಹಮ್ಮಿಕೊಂಡಿರುವ ಈ ವಿನೂತನ ಪ್ರಯೋಗ  ತುಂಬ ಖುಷಿಕೊಟ್ಟಿತು ಎಂದು ಹೇಳಿದರು
ನಗರದ ಹಾಸ್ಯಕೂಟ ಮತ್ತು ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ
ಶನಿವಾರ ದಂದು ಬೆಳಗಾವಿಯ  ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನ ಸಭಾ ಭವನದಲ್ಲಿ *ಬಹುಭಾಷಾ ಹಾಸ್ಯಗೋಷ್ಠಿ* ಹಮ್ಮಿಕೊಂಡಿದ್ದರು ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಇಂಚಲ ಅವರು ಮೇಲಿನಂತೆ  ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಮಾತನಾಡುತ್ತ  ಬಹುಭಾಷಾ ಕವಿಗೋಷ್ಠಿ, ಹಾಸ್ಯಗೋಷ್ಠಿ, ಸಾಹಿತ್ಯಗೋಷ್ಠಿಗಳು ಎಲ್ಲ ಭಾಷಿಕರನ್ನು ಒಂದೆಡೆ ಸೇರಿಸುತ್ತವೆ. ಮಾತೃ ಭಾಷಾಭಿಮಾನವಿರಲಿ.  ಬೇರೆ ಬೇರೆ ಭಾಷೆಗಳನ್ನು ಪ್ರೀತಿಸೋಣ, ಅಭ್ಯಾಸ ಮಾಡೋಣ ಎಂದು ಹೇಳಿದರು.
ಪ್ರಾಯೋಜಕತ್ವವನ್ನು ಕೆ.ಎಸ.ಆರ್.ಟಿ.ಸಿ.ಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಬಿ.ಎ. ಪಾಟೀಲ ವಹಿಸಿಕೊಂಡಿದ್ದರು.  ಎಸ್. ವಿ. ದೀಕ್ಷಿತ(ಹಿಂದಿ),  ಚಿದಂಬರ ಮುನವಳ್ಳಿ(ಇಂಗ್ಲೀಷ), ದೀಪಿಕಾ ಕುಲಕರ್ಣಿ(ಕನ್ನಡ) ವೃಂದಾ ಮುತಾಲಿಕದೇಸಾಯಿ(ಮರಾಠಿ), ಚಿನಗುಡಿ(ಕನ್ನಡ), ರಂಗಭೂಮಿ ಕಲಾವಿದರಾದ ಶ್ರೀಮತಿ ಭಾರತಿ ದಾವಣಗೇರೆ ಮತ್ತು ರೇಶ್ಮಾ  ಇಳಕಲ್ಲ ನಾಟಕಗಳಲ್ಲಿಯ ಹಾಸ್ರಪ್ರಸಂಗಗಳನ್ನು ಹಂಚಿಕೊಂಡು ಜನರನ್ನು ರಂಜಿಸಿದರು. ಜಿ. ಎಸ್. ಸೋನಾರ ನಿರೂಪಿಸಿದರು.
error: Content is protected !!