ಬೆಳಗಾವಿ-21:ಬೆಳಗಾವಿಗೆ ಆಗಮಿಸಿದ ಮಾನ್ಯ ಮುಖ್ಯ ಚುನಾವಣಾ ಆಯುಕ್ತರಾದ ವಿ ಅನುಪ್ ಕುಮಾರ್ IAS ಅವರನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೆಳಗಾವಿ ಎಲ್ಲ BLO ಗಳ ಪರವಾಗಿ ಭೇಟಿ ಮಾಡಿ ಸ್ವಾಗತಿಸಿ BLO ಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆGAL ಕುರಿತು ಮನವಿ ಮಾಡಲಾಯಿತು, ಮುಖ್ಯವಾಗಿ ಹಿರಿಯ ಅಧಿಕಾರಿಗಳಿಂದ ಆಗುತ್ತಿರುವ ಒತ್ತಡಕುರಿತು ಗಮನ ಸೆಳೆಯಲಾಯಿತು ಅಲ್ಲದೇ ದೈನಂದಿನ ಕರ್ತವ್ಯದೊಂದಿಗೆ ತಮ್ಮದೇ ಮೊಬೈಲ್ ಬಳಸಿ SIR ಕಾರ್ಯ ನಿರ್ವಹಿಸುತ್ತಿದ್ದು BLO ರವರಿಗೆ ಗೌರವ ಧನವನ್ನು ರೂ.50000/(ಐವತ್ತು ಸಾವಿರ ರೂಪಾಯಿ)ಗಳಿಗೆ ಹೆಚ್ಚಿಸಬೇಕು, ನಿಗದಿತ ಅವಧಿಯವರೆಗೂ ಒತ್ತಡ ರಹಿತವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲು ವಿನಂತಿಸಲಾಯಿತು… ಮಾನ್ಯರು ಅತ್ಯಂತ ಕಡಿಮೆ ಸಮಯದಲ್ಲೂ ಸಹ ತಮ್ಮ ಬೆಳಗಾವಿಯ ಹಳೆಯ ಅನುಭಗಳನ್ನು ಹಂಚಿಕೊಂಡು ಇಲ್ಲಿಯವರೆಗೆ ಆದ SIR ಪ್ರಗತಿ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು…ಶ್ರೀ ಆಸೀಫ್ ಅತ್ತಾರ ರಾಜ್ಯ ಖಜಾಂಚಿಗಳು,ಆನಂದಗೌಡ ಕಾದ್ರೊಳ್ಳಿ, ಜಿಲ್ಲಾಧ್ಯಕ್ಷರು, ಶೇಖರ ಕರಂಬಳಕರ ಕಾರ್ಯಧ್ಯಕ್ಷರು,ನಗರ ಘಟಕದ ಮುಖಾಂಡರಾದ ಶ್ರೀ ಸುನೀಲ್ ದೇಸುರಕ, ಶ್ರೀ B. M. ರಸೂಲಾಖನ, ಪಾಟೀಲ ಸರ್ ರವರು ಹಾಜರಿದ್ದರು.
