ಬೆಳಗಾವಿ-21 : ಇತ್ತೀಚಿನ ದಿನಗಳಲ್ಲಿ ಬರವಣಿಗೆಗೆ ಕೊರತೆಯಿಲ್ಲ ಆದರೆ ಅದಕ್ಕೆ ಪುಸ್ತಕ ರೂಪ ನೀಡಿ ಮುದ್ರಣ ಮಾಡಿ ಹೊರ ತರುವುದು ಅತಿ ಕಠಿಣ ಕೆಲಸವಾಗಿದೆ. ಹಲವು ವರ್ಷಗಳಿಂದ ಸಾಹಿತ್ಯ ಸೇವೆ ಮಾಡುತ್ತಿದ್ದರೂ ಸಹ ಆ ಬರುವಣಿಗೆಗೆ ಗ್ರಾಂಥಿಕ ರೂಪ ಕೊಡುವದು ತಡವಾದರೂ ಸಹ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಒಂದು ಕೃತಿ ನೀಡಿದ ಸಮಾಧಾನದ ಜೊತೆಗೆ ಎಲ್ಲರಿಗೂ ಸಹಕಾರಿ ಆಗುವ ಮಾರ್ಗದರ್ಶಿ ಆಗಿರುವ ಗ್ರಂಥ ನೀಡಿರುವ ಸಮಾಧಾನ ಈ ಕೃತಿ ನೀಡುವ ವಿಶ್ವಾಸ ಇದೆ ಎಂದು ಸಾಹಿತಿ ಪಾರ್ವತಿ ತುಪ್ಪದ ಶನಿವಾರ ದಿ 18 ರಂದು ಬೆಳಗಾವಿ ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬೆಳಗಾವಿ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿ ರಚನೆ ಕುರಿತು ಮಾತನಾಡುತ್ತಾ ತಮ್ಮ ಅನುಭವ ಹಂಚಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಕ ಸಾ. ಪ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ “ಶ್ರೀ ಲೀಲಾಮೃತ ‘ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ ಈ ಗ್ರಂಥ ಓದುಗರಲ್ಲಿ ಭಕ್ತಿಯ ಭಾವವನ್ನು ಮೂಡಿಸುವುದರ ಜೊತೆಗೆ ಸಮಸ್ತ ಕರ್ನಾಟಕ ಸೇರಿದಂತೆ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳ ಸಂಕ್ಷಿಪ್ತವಾದ ಇತಿಹಾಸದ ಜೊತೆಗೆ ಪ್ರವಾಸ ಮಾರ್ಗದರ್ಶಿಯಾಗಿ ಕೆಲಸ ಮಾಡುವುದರ ಜೊತೆಗೆ ಎಲ್ಲರೂ ಸಂಗ್ರಹಿಸಲು ಯೋಗ್ಯವಾದ ಉತ್ತಮ ಗ್ರಂಥ ಇದಾಗಿದೆ ಇಂತಹ ಕೃತಿಗಳು ಇನ್ನಷ್ಟು ಬರಲಿ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಾಹಿತ್ಯದ ಪೋಷಣೆ ಕಾರ್ಯ ನಿರಂತರವಾಗಿ ಜರುಗುತ್ತ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಗಳಾದ ಯ. ರು. ಪಾಟೀಲ, ಸುಭಾಷ ಏಣಗಿ, ಜ್ಯೋತಿ ಬದಾಮಿ ಕೃತಿ ರಚನೆ ಕುರಿತು ಅನುಭವದ ಮಾತುಗಳನ್ನು ಆಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದದಿಂದ ಸಾಹಿತಿ ಪಾರ್ವತಿ ತುಪ್ಪದ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶೈಲಜಾ ಬಿಂಗೆ, ಶ್ರೀರಂಗ ಜೋಶಿ, ಮಧುಕರ ಗುಂಡೇನಟ್ಟಿ, ಜಿ. ಎಸ್. ಸೋನಾರ, ಬಿ. ಬಿ. ಮಠಪತಿ, ಜಯಶೀಲಾ ಬ್ಯಾಕೋಡ, ಭಾರತಿ ಮಠದ, ಶಿವಾನಂದ ನಾಯಕ, ಡಾ ಸುನೀಲ ಪರೀಟ, ಬಾಳಗೌಡ ದೊಡಭಂಗಿ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಡಾ. ಹೇಮಾ ಸೋನೋಳ್ಳಿ ಸ್ವಾಗತಿಸಿದರು. ಎಂ. ವೈ ಮೆಣಸಿನಕಾಯಿ ಪರಿಚಯಿಸಿದರು ಶಿವಾನಂದ ತಲ್ಲೂರ ನಿರೂಪಿಸಿ ವೀರಭದ್ರ ಅಂಗಡಿ ವಂದಿಸಿ ಕಾರ್ಯಕ್ರಮ ಮುಕ್ತಾಯವಾಯಿತು.
