13/06/2026
IMG-20260612-WA0002

ಬೆಳಗಾವಿ-12 : ತಾಲೂಕಿನ ಕಡೋಲಿ ಗ್ರಾಮದಲ್ಲಿನ ಕೆಲವು ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗಳನ್ನು ಮರುಚಾಲ್ತಿ ಮಾಡಿಕೊಡಬೇಕೆಂದು ಸಂಬಂಧಿತ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನೆ ಯಾಗಿಲ್ಲವೆಂದು ಆರೋಪಿಸಿ ಗುರುವಾರ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದಿರು.
ಕಡೋಲಿ ಗ್ರಾಮದ ಹಲವು ರೈತರು ಆಗಮಿಸಿ ಬ್ಯಾಂಕ್ ನಲ್ಲಿ ತಮ್ಮಗೆ ಯಾಗಿರುವ ತೊಂದರೆ ಕುರಿತು ಆಸಮಾಧಾನ ಹೋರ ಹಾಕಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಹಾಗೂ ರೈತ ಮಹಿಳೆಯರು ಪ್ರತಿಭಟಿಸಿದರು. ರೈತರು ಬ್ಯಾಂಕ್ ನಲ್ಲಿ ತೆಗೆದುಕೊಂಡ ಸಾಲವನ್ನು ಒನ್ ಟೈಮ್ ಸೆಟ್ಲಮೆಂಟ್ (OTS) ಮೂಲಕ ಹಣ ತುಂಬಿಸಿಕೊಂಡು ಮುಕ್ತಾಯಗೊಳಿಸಿದ್ದಾರೆಂದರು.
ಆದರೆ ಅದೇ ಖಾತೆಗಳಿಗೆ ಉದ್ಯೋಗ ಖಾತರಿ ಯೋಜನೆ (ರೋಜಗಾರ) ಸೇರಿದಂತೆ ಇತರೆ ಮೂಲಗಳಿಂದ ಹಣ ಜಮೆ ಯಾಗುತ್ತಿದ್ದು, ಆ ಹಣವನ್ನು ಗ್ರಾಹಕರು ತಮ್ಮ ಖಾತೆಗಳಿಂದ ಪಡೆಯಲು ಸಾಧ್ಯವಾಗುತ್ತಿಲ್ಲ. ಬ್ಯಾಂಕಿನ ನಿಯಮಾವಳಿಗಳ ಕಾರಣದಿಂದ ಖಾತೆಗಳು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲು ತೊಂಡಿಕೊಂಡರು.
ಇದಲ್ಲದೆ, ಬ್ಯಾಂಕ್ ಅಧಿಕಾರಿಗಳು, ಬೇರೆ ಬ್ಯಾಂಕ್ನಲ್ಲಿ ಹೊಸ ಖಾತೆ ತೆರೆಯಿರಿ, ನಮ್ಮ ಬ್ಯಾಂಕ್ನಲ್ಲಿ ಈ ಖಾತೆಗಳನ್ನು ಮರುಚಾಲ್ತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಗ್ರಾಹಕರನ್ನು ಬ್ಯಾಂಕ್ ನಿಂದ ವಾಪಸ ಕಳಿಸುತ್ತಿದ್ದಾರೆಂದು ಆರೋಪಿಸಿದರು.
ತಮ್ಮ ಸ್ವಗ್ರಾಮದಲ್ಲಿರುವ ಬ್ಯಾಂಕ್ ಸೇವೆಯನ್ನು ಬಿಟ್ಟು ಬೇರೆ ಊರು ಅಥವಾ ಬ್ಯಾಂಕ್ಗೆ ತೆರಳಿ ಖಾತೆ ತೆರೆಯುವುದಕ್ಕೆ ಹಾಗೂ ರೈತರ ಯಾವುದೇ ಸಣ್ಣ ಪುಟ್ಟ ಕೃಷಿಗೆ ಸಂಬಂಧಿಸಿದ ಕೆಲಸಗಳಿಗೆ ಬೇರೆ ಊರುಗಳಿಗೆ ಹೊಗುವುದಕ್ಕೆ ಸಾಧ್ಯವಿಲ್ಲ, ರೈತರಿಗೆ ಅನಕೂಲ ವಾಗುವಂತೆ ಕಡೋಲಿ ಗ್ರಾಮದಲ್ಲಿಯೇ ರೈತರ ಬ್ಯಾಂಕ್ ಖಾತೆ ತೆಯುವುದಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ರೈತರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ರೈತರಿಗೆ ಯಾಗಿರುವ ತೊಂದರೆಗಳ ಬಗ್ಗೆ ಕಡೋಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡಿ, ತೊಂದರೆಗಳನ್ನು ಕೂಡಲೇ ಸರಿ ಪಡಿಸುವುದಕ್ಕೆ ಬ್ಯಾಂಕ್ ನ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆಂದು ಭರವಸೆ ನೀಡಿದರು.
ಈ ವೇಳೆ ಅಪ್ಪಾಸಾಹೇಬ್ ದೇಸಾಯಿ, ರಾಜು ಕಂಗ್ರಾಳಿಕರ್, ಅಮೀತ್ ಕಡಕೆ, ಸೇರಿದಂತೆ ಹಲವರು ರೈತರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

error: Content is protected !!