11/06/2026
IMG-20260610-WA0016

ಬೆಳಗಾವಿ-11: ಜಿಲ್ಲೆಯಲ್ಲಿನ ಕೆಲ ಅಂಗನವಾಡಿ ಕಾಯರ್ತೆಯರು, ಅನಾರೋಗ್ಯದಿಂದ ಬಳಲುತ್ತಿದ್ದ ಬೂತ್ ಮಟ್ಟದ ಅಧಿಕಾರಿ (ಬಿ.ಎಲ್.ಒ.) ಕರ್ತವ್ಯಗಳಿಂದ ವಿನಾಯಿತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಬೆಳಗಾವಿ ತಾಲೂಕು ಸಮಿತಿಯು ನೇತ್ರತ್ವದಲ್ಲಿ ತಹಶೀಲ್ದಾರ ಅವರಿಗೆ ಮನವಿ ಮಾಡಿಕೊಂಡರು.

ಬುಧವಾರ ಹಲವು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರು ಬೆಳಗಾವಿ ನಗರದಲ್ಲಿರುವ ತಹಶೀಲ್ದಾರ ಕಛೇರಿಗೆ ತೆರಳಿ, ಅಂಗನವಾಡಿ ಕಾರ್ಯಕರ್ತೆಯಲ್ಲಿ ಯಾಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿದರು.
ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರ ತಾಲೂಕು ಅಧ್ಯೆಕ್ಷೆ ಮಂದಾ ವಿ. ನೇವಗಿ ಅವರು, ಮಾತನಾಡಿ ಬೆಳಗಾವಿ ತಾಲೂಕಿನ ಹಲವಾರು ಅಂಗನವಾಡಿ ಕಾರ್ಯಕರ್ತೆಯರು ರಕ್ತದೊತ್ತಡ (ಬಿ.ಪಿ.), ಮಧುಮೇಹ (ಶುಗರ್) ಸೇರಿದಂತೆ ವಿವಿಧ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ನಿರಂತರ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿ.ಎಲ್.ಒ. ಕರ್ತವ್ಯ ಸಮರ್ಪಕವಾಗಿ ನಿರ್ವಹಿಸುವುದು ಅವರುಗಳಿಗೆ ಕಷ್ಟಕರವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದರು.
ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಬಿ.ಎಲ್.ಒ. ಕರ್ತವ್ಯಗಳಿಂದ ಮುಕ್ತಗೊಳಿಸಿ, ಅವರಿಗೆ ಅಗತ್ಯವಾದ ಸೌಲಭ್ಯ ಹಾಗೂ ಅನುಕೂಲಗಳನ್ನು ಕಲ್ಪಿಸಿಕೊಡಬೇಕೆಂದು ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಸಿಐಟಿಯು ಬೆಳಗಾವಿ ತಾಲೂಕು ಅಧ್ಯಕ್ಷೆ ಮಂದಾ ವಿ. ನೇವಗಿ ಸೇರಿದಂತೆ ಹಲವಾರು ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!