10/06/2026
IMG-20260609-WA0029

ಬೆಳಗಾವಿ-10 : ಮಹಾಜನ ಆಯೋಗದ ಕಾಲದಲ್ಲಿ ನನ್ನ ತಂದೆ ನೂರುದ್ದೀನ್ ಅವರು ಬೆಳಗಾವಿ ಕರ್ನಾಟಕದಲ್ಲಿಯೇ ಉಳಿಯಬೇಕೆಂದು ನಡೆದ ಹೋರಾಟದಲ್ಲಿ ಭಾಗವಹಿಸಿದ ನಾಯಕರಲ್ಲಿ ಒಬ್ಬರಾಗಿದ್ದರು. ಹೀಗಾಗಿ ಬೆಳಗಾವಿ ಬಗ್ಗೆ ನನಗೂ ಬದ್ಧತೆಯಿದೆ” ಎಂದು ಶಾಸಕ ಆಸೀಫ್ ಸೇಠ್ ಹೇಳಿದ್ದಾರೆ.

ಬೆಳಗಾವಿ ಪಾಲಿಕೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಕರ್ನಾಟಕ ಪರ ಗೊತ್ತುವಳಿಯನ್ನು ತಾವೇ ಮಂಡಿಸುವುದಾಗಿ ಅವರು ಘೋಷಿಸಿದರು. ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈ ಗೊಳ್ಳಲಾಯಿತು ಎಂದರು.
ಇದರ ಬೆನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಕನ್ನಡಪರ ಸಂಘಟನೆಗಳ ಮುಖಂಡರು ಶಾಸಕ ಆಸಿಫ್ ಸೇಠ್ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.

ಈ ವೇಳೆ, ಗೊತ್ತುವಳಿ ಅಂಗೀಕರಿಸುವ ಸಲುವಾಗಿ ಶೀಘ್ರದಲ್ಲೇ ಪಾಲಿಕೆಯ ಸರ್ವಸಾಧಾರಣ ಸಭೆ ಕರೆಯುವಂತೆ ಮಹಾಪೌರರಿಗೆ ಪತ್ರ ಬರೆಯಲಾಗುವುದು ಎಂದು ಅವರು ಭರವಸೆ ನೀಡಿದರು.

ಶಾಸಕರ ಈ ನಿಲುವನ್ನು ಕನ್ನಡ ಸಂಘಟನೆಗಳು ಸ್ವಾಗತಿಸಿದ್ದು, ಕಳೆದ 75 ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಆದಷ್ಟು ಬೇಗ ಗೊತ್ತುವಳಿ ಅಂಗೀಕಾರದ ಮೂಲಕ ಸುಖಾಂತ್ಯ ಸಿಗಲಿ ಎಂಬ ಆಶಯ ವ್ಯಕ್ತಪಡಿಸಿದ್ದರು. ‌

Leave a Reply

Your email address will not be published. Required fields are marked *

error: Content is protected !!