17/05/2026


ಬೆಳಗಾವಿ-16 : ಜಾತಿ ಪ್ರಮಾಣ ಪತ್ರದಲ್ಲಿ ದಾಖಲಾದ ಮಾಹಿತಿಯನ್ನು ತಿದ್ದುಪಡಿ ಮಾಡಿ ರಪ್ಪು ಸಂದೇಶವನ್ನು ನೀಡಿರುವ ಅಧಿಕಾರಿಗಳ ನಡೆಯನ್ನು ಖಂಡಿಸಿ ಶ್ರೀ ನಾಮದೇವ ದೈವಿಕ ಸಂಸ್ಥೆಯ ಸದಸ್ಯರು ಹಾಗೂ ಕಾರ್ಯಕರ್ತರಿಂದ ಪತ್ರಿಭಟನೆ ನಡೆಸಿದರು.
ಶ್ರೀ ನಾಮದೇವಿ ಸಂಸ್ಥೆಯ ಸದಸ್ಯರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿ, ಭಾರತಿಯ ಪ್ರತಿಯೊಬ್ಬ ನಾಗರಿಕನೂ ತನ್ನ ಧರ್ಮ, ಜಾತಿ ಸಂಸ್ಕೃತಿ ಹಾಗೂ ಸಾಮಾಜಿಕ ಗುರುತಿನೊಂದಿಗೆ ಬದುಕುವ ಹಕ್ಕಿದೆ. ಸರ್ಕಾರಿ ಅಧಿಕಾರಿಗಳು ಜವಾಬ್ದಾರಿಯಿಂದ ಸಾರ್ವಜನಿಕರ ದಾಖಲಾತಿಗಳನ್ನು ಪರಿಶೀಲನೆ ಮಾಡಬೇಕು. ಆದರೆ ಅದ್ವಿಕ್ ಸುಜಿತ್ ಖಟಾವಕರ ಅವರ, ಜಾತಿ ಪ್ರಮಾಣ ಪತ್ರದಲ್ಲಿ ತಪ್ಪಾದ ದಾಖಲಾದ ಮಾಹಿತಿಯನ್ನು ತಿದ್ದುಪಡಿ ಮಾಡಿ ನಮ್ಮ ಸಮಾಜಕ್ಕೆ ಹಾಗೂ ಅದ್ವಕ್ ಸುಜಿತ್ ಖಟಾವಕರ ಅವರಿಗೆ ಅವಮಾನ ಮಾಡಿದ್ದಾರೆಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಅಸಮಾಧಾನವನ್ನು ಹೊರ ಹಾಕಿ ಪ್ರತಿಭಟಿಸಿದರು.
ಬೆಳಗಾವಿ ನಗರದ ತಸಿಲ್ದಾರ್ ಕಛೇರಿಯಲ್ಲಿ ಸರ್ಕಾರಿ ಅಧಿಕಾರಿಗಳು ನಿಷ್ಠೆಯಿಂದ ಸಾರ್ವಜನಿಕರ ಕೆಲಸ ಗಳನ್ನು ಮಾಡಿಬೇಕು, ಆದರೆ ಕಾಟಾಚಾರಕ್ಕೆ ಕೆಲಸವನ್ನು ಮಾಡುತ್ತಿದ್ದಾರೆಂದು ಆರೋಪಿಸಿ ದಾಖಲಾತಿಗಳ ಮಾಹಿತಿಯನ್ನು ತಿದ್ದುಪಡಿ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡಿರುವ ಅಧಿಕಾರಿಗಳ ವಿರುದ್ದ ಕೂಡಲೇ ಕಾನೂನಿನ ಕ್ರಮ ಕೈಗೊಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಿಕೊಂಡರು. ಒಂದು ವೇಳೆ ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳದೆ ಇದ್ದಲ್ಲಿ ತಹಶಿಲ್ದಾರ ಕಛೇರಿಯ ಎದರು ಧರಣಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಚ್ಚರಿಸಿದರು.
ಈ ವೇಳೆ ಶ್ರೀ ನಾಮದೇವ ದೈವಿಕ ಸಂಸ್ಥೆಯ ಸದಸ್ಯರುಗಳು ಕಾರ್ಯರ್ತರು ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!