ಬೆಳಗಾವಿ-15:ಗುರುವಾರ ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ ಮಾಲೀಕನ ಕಚೇರಿ ಮೇಲೆ ದಾಳಿ.
ಶಿವಾನಂದ ನೀಲಣ್ಣನವರ್ ಗೆ ಸೇರಿದ ಎರಡು ಕಚೇರಿ ಮೇಲೆ ದಾಳಿ.
ಶಿವ ಬಸವ ನಗರದಲ್ಲಿ ಇರೋ ಕಚೇರಿಯ ಮೇಲೆ ದಾಳಿ.
ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರಮಣ ನಾಯಕ್ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳಿಂದ ದಾಳಿ.
ಕಚೇರಿಯಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆ ಕಾರ್ಯ.
ಮಾಜಿ ಸೈನಿಕರು ಹಾಗೂ ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ನೀಡುವುದಾಗಿ ಹಣ ಸಂಗ್ರಹ.
ಹೂಡಿಕೆಯಾಗಿರೋ ಸಾವಿರಾರು ಕೋಟಿ ರೂಪಾಯಿ ಹಣ ದುರುಪಯೋಗ ಆಗಿರೊ ಸಂಶಯ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶಿವಾನಂದ ನೀಲಣ್ಣವರ್ ವಿಡಿಯೋ ವೈರಲ್.
ನಮ್ಮ ಬಳಿ 15 ಸಾವಿರ ಬಂದೂಕ್ ಇವೆ,
ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ.
ನಾನು ಯಾರಿಗೂ ಹೆದರಲ್ಲ, ನಿಮ್ಮನ್ನು ಗಂಡಸರನ್ನಾಗಿ ಮಾಡಲು ಬಂದಿದ್ದೇನೆ ಎಂದು ಭಾಷಣ.
2028ಕ್ಕೆ ಒಂದೇ ಸಲ 224 ಸ್ಥಾನ ಗೆದ್ದು ಸಿಎಂ ಆಗುತ್ತೇನೆ ಎಂದೆಲ್ಲ ಭಾಷಣ.
ಕಡೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದ ವಿಡಿಯೋ ವೈರಲ್.
ಮೇ 17ರಂದು ಸ್ವಚ್ಛ ಬೆಳಗಾವಿ ಕಾರ್ಯಕ್ರಮ ಆಯೋಜನೆ.
ಶಿವಾನಂದ ನೀಲಣ್ಣವರ್ ನೇತೃತ್ವದಲ್ಲಿ ಸ್ವಚ್ಛ ಬೆಳಗಾವಿ ಕಾರ್ಯಕ್ರಮ.

