29/03/2026
IMG-20260327-WA0001

ಬೆಳಗಾವಿ-28 : ಜಿಲ್ಲೆಯ ಸೌದತ್ತಿ ತಾಲೂಕಿನ ಹಾರೋಗೋಪದಲ್ಲಿರುವ ಮಧ್ಯದ ಅಂಗಡಿ ಹಾವಳಿಯಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಯುವಕರಿಂದ ಹಿಡಿದು ವೃದ್ಧರವರೆಗೂ, ಮಧ್ಯದ ವ್ಯಸನದಿಂದ ಕುಟುಂಬಗಳು ಬೀದಿಗೆ ಬರುವಂತಾಗುತ್ತಿದೆ ಎಂದು ಆಕ್ರೋಶವನ್ನು ಹೋರ ಹಾಕಿ ಚಚಡಿ ಗ್ರಾಮದ ಮಹಿಳೆಯರು ಜಿಲ್ಲಾಧಿಕಾರಿಗಳ ಕಛೇರಿ ಎಂದರು ಮದ್ಯದ ಅಂಗಡಿ ಬಂದ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಧ್ಯದ ಅಂಗಡಿ ಬಂದ್ ಮಾಡುವಂತೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ಮಹಿಳೆಯ ಸಂಕಷ್ಟವನ್ನು ಸ್ಪಂದಿಸಿದ ಮಧ್ಯದ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಚಚಡಿ ಗ್ರಾಮದ ಮಹಿಳೆ ಒಬ್ಬರು ಮಾತನಾಡಿ, ಹಾರೊಗೊಪ್ಪದಲ್ಲಿ ಮಧ್ಯದ ಅಂಗಡಿಯಿಂದ ಪ್ರತಿನಿತ್ಯ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು, ಹಾರೂಗೊಪ್ಪ-ಚಚದಿ ವೃತ್ತದಲ್ಲಿ ಮಧ್ಯದ ಅಂಗಡಿ ಇದ್ದು, ಅಲ್ಲಿ ಮಧ್ಯಮವನ್ನು ಸೇವನೆ ಮಾಡಿ ರಸ್ತೆದಾಟುವ ವೇಳೆ ಸಾಕಷ್ಟು ಅಪಘಾತಗಳು ಸಂಭವಿಸಿ ಕೆಲ ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜನತೆಯ ಸಾವು ನೋವುಗಳಿಗೆ ಕೊನೆಯ ಯಾರು ಎಂದು ಪ್ರಶ್ನೆ ಮಾಡಿದರು. ಮನೆಯ ಯಜಮಾನರು ಕೆಲಸ ಕಾರ್ಯಗಳನ್ನು ಬಿಟ್ಟು ದಿನವಡಿ ಮಧ್ಯ ಸೇವನೆ ಮಾಡುತ್ತಿದ್ದು, ಮಹಿಳೆಯರು ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದೆ, ಇದರಿಂದಾಗಿ ಸಾಕಷ್ಟು ಕುಟುಂಬದ ಮಹಿಳೆಯರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಳ್ಳುವುದರ ಮೂಲಕ ಕೂಡಲೇ ಮಧ್ಯದ ಅಂಗಡಿಗಳನ್ನು ಬಂದ ಮಾಡುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಈ ವೇಳೆ ಹಾರೂಗೊಪ್ಪ-ಚಚದಿ ಗ್ರಾಮದ ಅನೇಕರು ಉಪಸ್ಥಿತಿ ರಿದ್ದರು.

Leave a Reply

Your email address will not be published. Required fields are marked *

error: Content is protected !!