05/02/2026
IMG-20260204-WA0000

ಬೆಳಗಾವಿ-04: ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತದ ಬೇಜವಾಬ್ದಾರಿ ಪಾಲಿಕೆ ಆಡಳಿತದಲ್ಲಿ ಹೊಂದಾಣಿಕೆ ಇಲ್ಲದೆ ಸಂಪೂರ್ಣ ನಾಶವಾಗುತ್ತಿದೆ ಎಂದು ರಾಜಕುಮಾರ ಟೋಪಣ್ಣವರ ಗಂಭೀರವಾಗಿ ಆರೋಪಿಸಿದರು.
ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿ ನಗರದಲ್ಲಿ ಸಿಐಟಿಐಐಎಸ್ 2.0 ಯೋಜನೆ ಜಾರಿಗೆ ಬಂದರೆ ತ್ಯಾಜ್ಯ ನಿರ್ವಹಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗಲಿದೆ. ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸಿ ಮರುಬಳಕೆ, ಕಾಂಪೋಸ್ಟ್ ಉತ್ಪಾದನೆ, ಸ್ವಚ್ಛತೆ ಸುಧಾರಣೆ ಹಾಗೂ ಹಸಿರು ಉದ್ಯೋಗಗಳ ಸೃಷ್ಟಿಗೆ ಈ ಯೋಜನೆ ಸಹಕಾರಿಯಾಗಲಿದೆ. ಪರಿಸರ ಸಂರಕ್ಷಣೆ, ಆರೋಗ್ಯ ಭದ್ರತೆ ಮತ್ತು ನಗರ ಸೌಂದರ್ಯ ವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಿದೆ. ಆದರೆ ಯೋಜನೆ ಯಶಸ್ವಿಯಾಗಲು ನಗರ ಪಾಲಿಕೆ ತನ್ನ ಪಾಲಿನ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಟೆಂಡರ್ ಪ್ರಕ್ರಿಯೆಯನ್ನು ಆಮೇ ಗತ್ತಿಯಲ್ಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಆರು ಸ್ಮಾರ್ಟ್ ಸಿಟಿಗಳ ಪೈಕಿ ಬೆಳಗಾವಿ ನಗರಕ್ಕೆ ಕೇಂದ್ರ ಸರಕಾರ ಆಯ್ಕೆ ಮಾಡಿತ್ತು. ಸಿಐಟಿಐಐಎಸ್ 2.0 ಈ ಯೋಜನೆಯಲ್ಲಿ ಕಸ ಘನ ತಾಜ್ಯವಿಲೇವಾರಿಯಲ್ಲಿ ಹೊಸ ವ್ಯವಸ್ಥೆ ಮಾಡಿ ಬೆಳಗಾವಿ ಆಯ್ಕೆ ಮಾಡಲಾಗಿದೆ. ಆದರೆ ಮಹಾ ಪಾಲಿಕೆಯ ಕೌನ್ಸಿಲ್ ದುರಾಡಳಿತದಿಂದ ಬಂದಿರುವ ಯೋಜನೆ ಕೈತಪ್ಪುವ ಹೋಗುವ ಪರಿಸ್ಥಿತಿ ನಿರ್ಮಾಣವಾಗಿರುವುದು ಖೇದಕರ ಸಂಗತಿ ಎಂದು ಅಸಮಾದಾನ ಹೋರ ಹಾಕಿದರು.
ಸಿಐಟಿಐಐಎಸ್ 2.0138 ಕೋಟಿ ರೂ. ಯೋಜನೆ ಇದೆ. ಇದಕ್ಕೆ ಬೆಳಗಾವಿ ನಗರ ಆಯ್ಕೆಯಾಗಿದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ತಲಾ 40% ಹಾಗೂ ಬೆಳಗಾವಿ ಪಾಲಿಕೆ 20% ಕೊಡಬೇಕು. ಈಗಾಲೇ ಪಾಲಿಕೆಯಿಂದಲೂ 20% ಕೊಡುವುದಾಗಿ ಠರಾವ್ ಪಾಸ್ ಮಾಡಲಾಗಿದೆ. ರಾಜ್ಯ ಸರಕಾರ ಕೊಡಬೇಕಿದ್ದ 40% ಅನುದಾನ ಈಗಾಗಲೆ ಪಾಲಿಕೆಗೆ ಕೊಟ್ಟಿರುಗ ಅನುದಾನ ಬಳಕೆ ಮಾಡಿಕೊಳ್ಳಬೇಕೆಂದು ಸೂಚಿಸಿದೆ. ಹಾಗಾಗಿ 131 ಕೋಟಿ ರೂ. ಪೈಕಿ 81 ಕೋಟಿ ರೂ ಪಾಲಿಕೆ ಅನುದಾನ ಕೊಡದಿದ್ದರೆ ಯೋಜನೆ ವಾಪಸ್ಸ ಹೋಗುತ್ತದೆ. ಹಣ ಹೊಂದಾಣಿಕೆ ಮಾಡಿ ಯೋಜನೆ ಪ್ರಾರಂಭಿಸುವುದು ಪಾಲಿಕೆ ಕೌನ್ಸಿಲ್ ಜವಾಬ್ದಾರಿ. ಆದರೆ 65 ಕೋಟಿ ತೆರಿಗೆ ಸಂಗ್ರಹ ಮಾಡಿ 60 ಕೋಟಿ ರೂ. ಖರ್ಚು ಮಾಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ 81 ಕೋಟಿ ರೂ. ಪಾಲಿಕೆ ಕೌನ್ಸಿಲ್ ಹೊಂದಾಣಿಕೆ ಮಾಡುತ್ತದೆ. ಈ ಯೋಜನೆ ಅನುಷ್ಠಾನಕ್ಕೆ ಬರುತ್ತದೆಯೋ ಅಥವಾ ಮರಳಿ ಹೊಗುತ್ತದೆಯೋ ಇದನ್ನು ಯಾವ ರೀತಿ ಪಾಲಿಕೆ ಕೌನ್ಸಿಲ್ ತೆಗೆದುಕೊಂಡಿದೆ ಎಂದು ಪಾಲಿಕೆ ಉತ್ತರಿಸಬೇಕೆಂದರು.
ಪಾಲಿಕೆಗೆ ಬರಬೇಕಾದ ಆದಾಯ ಸುಧಾರಣೆ ಮಾಡಿಲ್ಲ. ಕಳೆದ ಮಾ.2022 ರಿಂದ ಪಾಲಿಕೆಯ ಆದಾಯದಲ್ಲಿ ಕಡಿಮೆಯಾಗಿದೆ. ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 1 ಲಕ್ಷ 58 ಸಾವಿರ ಆಸ್ತಿಗಳಿವೆ. ಅದರಲ್ಲಿ 70%ರಷ್ಟು ಜನ ತೆರಿಗೆ ಕಟ್ಟುತ್ತಾರೆ. 30% ರಷ್ಟು ಜನ ತೆರಿಗೆ ಕಟ್ಟಿಲ್ಲ ಎಂದು ಆರೋಪಿಸಿದರು.
ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಬಂದಾಗಿನಿಂದಲೂ ತೆರಿಗೆ ಸಂಗ್ರಹಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ನಗರದಲ್ಲಿರುವ ಪಾಲಿಕೆಯ ವಾಣಿಜ್ಯ ಮಳಿಗೆಗಳ ಅವಧಿ ಕಳೆದ ಮಾ.22ಕ್ಕೆ ಮುಗಿದಿವೆ. ಹೊಸ ಆಕ್ಷನ್ ಮಾಡಿಲ್ಲ. ಇದ್ದ ವಾಣಿಜ್ಯ ಮಳಿಗೆ ಹಾಗೆ ನಡೆದಿವೆ. ಇದರಿಂದ ಪಾಲಿಕೆಗೆ ಲಕ್ಷಾಂತರ ರೂ. ತೆರಿಗೆ ವಂಚನೆಯಾಗುತ್ತಿದೆ. ಒಂದು ಕಡೆ ಪಾಲಿಕೆಯ ಆದಾಯ ಹೆಚ್ಚಾಗಿಲ್ಲ. ಪಾಲಿಕೆಯಲ್ಲಿ ಸದಸ್ಯರ ಅನಾವಶ್ಯಕ ಖರ್ಚು, ವೆಚ್ಚಗಳು ಹೆಚ್ಚಾಗುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದರು.
ಈ ವೇಳೆ ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ, ರಾಜಕುಮಾರ ಟೋಪಣ್ಣವರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!