ಬೆಳಗಾವಿ-24: ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ ಲೇಡಿಸ ವಿಂಗ ವತಿಯಿಂದ ಇತ್ತಿಚಿಗೆ ಮಾಣಿಕಬಾಗ ಆಟೋಮೋಬೈಲ ಯುನಿಟ್‌ನಲ್ಲಿ ಮಹಿಳೆಯರಿಗಾಗಿ ಮೋಟಾರ ಕಾರ ಚಲಾವಣೆ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಕ್ರಮಗಳು ಮತ್ತು ಮೋಟಾರ್ ಕಾರ್ ಬಗ್ಗೆ ತಿಳುವಳಿಕೆಯ ಪ್ರಾಥಮಿಕ ಹಂತದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಿಳೆಯರು ಸ್ವಯಂ ಕಾರು ಚಲಾವಣೆ ಮಾಡುವ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಈ ತರಬೇತಿಯಲ್ಲಿ ಹೇಳಿಕೊಡಲಾಯಿತು. ಅದರ ಜೊತೆಗೆ ಮೋಟಾರ್ ಕಾರ್‌ನ ಅತ್ಯಾವಶವಾಗಿರುವ ಬಿಡಿ ಭಾಗಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ಕಾರು ಚಲಾವಣೆ ಸಂದರ್ಭದಲ್ಲಿ ಆಕಸ್ಮಿಕವಾಗಿ ವಾಹನ ಬಂದ ಆಗಿದ್ದಲ್ಲಿ ಯವುದೆ ಹೆದರಿಕೆ ಇಲ್ಲದೆ ಮಾನಸಿಕ ಒತ್ತಡಕ್ಕ ಒಳಗಾಗದೆ ಪಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಮಾಹಿತಿ ನೀಡಲಾಯಿತು.
ಇದರ ಜೊತೆಗೆ ಕಾರನಲ್ಲಿರುವ ಸ್ವೇರಿಂಗ, ಟಾಯರ ಪಂಚ್ಚರ ಆದ ಸಂದರ್ಭದಲ್ಲಿ ಕೈಗೊಳ್ಳಬೇಕಾಗ ಕ್ರಮಗಳು, ಬೆಕ್ ಫೇಲ ಆದಾಗ ಕೈಗೋಳ್ಳಬೇಕಾದ ಕ್ರಮಗಳು ಸೇರಿದಂತೆ ಕಾರಿನ ಎಲ್ಲ ಮಾಹಿತಿಯನ್ನು ತರಬೇತುದಾರ ಪ್ರವೀಣ ಶಿಂದೆ ಅವರು ಮಹಿಳೆಯರಿಗೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಮಹಿಳೆಯರು ಮತ್ತು ಯುವತಿಯರು ಭಾಗವಹಿಸಿದ್ದರು. ಜಿತೋ ಲೇಡಿಜ ವಿಂಗ ಚೇರಮನ್ ಮಾಯಾ ಜೈನ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶ ಕುರಿತು ಮಾತನಾಡಿದರು. ಕಾರ್ಯದರ್ಶಿ ಮಮತಾ ಜೈನ ವಂದಿಸಿದರು. ಕಾರ್ಯಕ್ರಮ ಸಂಯೋಜಕಿ ಸ್ವಾತಿ ಉಪಾಧ್ಯೆ ಸಹ ಸಂಯೋಜಕಿ ಮೇಧಾ ಶಹಾ, ಶಾಲಿನಿ ಚೌಗುಲೆ, ಮಮತಾ ಆರ್. ಜೈನ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.