ಬೆಳಗಾವಿ-21 : ಇತ್ತೀಚಿಗೆ ಬರುಡ ಕಾಲೋನಿಯಲ್ಲಿ,ಕಳೆದ ಮೂವತ್ತಾರು ವರ್ಷಗಳಿಂದ ಅಭಿವೃದ್ಧಿ ವಂಚಿತರಾಗಿರುವುದನ್ನು ಖಂಡಿಸಿ ಬರುಡ ಕಾಲೋನಿಯ ರಹವಾಸಿಗಳ ಕ್ಷೇಮಭಿರುದ್ಧಿ ಸಂಘದ ಕಾರ್ಯಕರ್ತರಿಂದ ಜಿಲ್ಲಾಧಿಕಾರಿಗಳ ಕಛೇರಿ ಎಂದುರು ಪ್ರತಿಭಟನೆ ನಡೆಸಿದರು.
ಬರುಡ ಕಾಲೋನಿಯ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಅಭಿವೃದ್ಧಿಗಾಗಿ ಆಗ್ರಹಿಸಿ ಪ್ರತಿಭಟಿಸಿ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ನಮ್ಮ ಅಳಲು ತೊಂದಿಕೊಂಡರು.
ಬೆಳಗಾವಿ ನೆಹರೂ ನಗರ ವ್ಯಾಪ್ತಿಯಲ್ಲಿ ಬರುವ ಸರ್ವೇ ಸಂ. 1358 ರಲ್ಲಿ ಕರ್ನಾಟಕ ಆದಾಗಿನಿಂದ ಸುಮಾರು 100 ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ, 1999 ರಲ್ಲಿ ನಿರ್ಮಿಸಿದ ಗಟಾರು, ಒಳವರಂಡಿ, ಒಳರಸ್ತೆಗಳ ಕಾಂಕ್ರೀಟ್ ಸೇರಿದಂತೆ ಅನೇಕ ಅಭಿವೃಧಿ ಕಾಮಗಾರಿಗಳು ಸಪೂರ್ಣವಾಗಿ ಹಾಳಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಥಳೀಯ ಕಾರ್ಪೂರೆಟಗಳಿಗೆ, ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಲವಾರು ಭಾರಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನೆ ಯಾಗಿಲ್ಲ ಎಂದು ಅಸಮಾಧಾನ ಹೋರ ಹಾಕಿದರು.
ಜಿಲ್ಲಾಡಳಿತ ಕೂಡಲೇ ಸ್ಪಂದಿಸಬೇಕು ಹಾಗೂ ಬರುಡ ಕಾಲೋನಿಯಲ್ಲಿರುವ ಮೂಲಭೂತ ಸೌಕರ್ಯಗಳನ್ನು ಪೂರೈಸಬೇಕೆಂದು ಜಿಲ್ಲಾದಿಕಾರಿಗಳಿಗೆ ಮನವಿ ನಾಡಿಕೊಂಡರು.
ಈ ವೇಳೆ ರಾಜು ನೇಸರಿಕರ್, ಎಂ,ವಿ ಮೇದಾರಾರ್ ಪಿ ಕರಡೇ, ಉಲ್ಲವ್ವಾ, ಮಗಾದೇವಿ ಮ್ಯಾದಾರ್, ಎಂಡಿ ಅಸವಾಲ್, ಬರುಡ ಕಾಲೋನಿಯ ನಿವಾಸಿಗಳು ಸೇರಿಂದತೆ ಮತ್ತಿತರರು ಉಪಸ್ಥಿತರಿದ್ದರು.
