29/01/2026
IMG-20260120-WA0001

ಬೆಳಗಾವಿ-20 : ನಗರದಲ್ಲಿರುವ ಕೋಟೆ ಕೆರೆಯಲ್ಲಿ ಕನ್ನಡ ಮಹನೀಯರ ಮೂರ್ತಿಗಳನ್ನು ಸ್ಥಾಪಿಸುವಂತೆ ಆಗ್ರಹಸಿ, ಯುವ ಕರ್ನಾಟಕ ವೇದಿಕೆಯ ಕಾರ್ಯಕರ್ತರ ನೇತ್ರತ್ವದಲ್ಲಿ ಮಹಾನಗರದ ಪಾಲಿಕೆಯ ಆಯುಕ್ತರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡರು.
ಸವದತ್ತಿ ರಟ್ಟರ ವಂಶದ ರಾಜ ಬಿತರಾಜ ಸ್ಥಾಪಿಸಿದ ಬೆಳಗಾವಿ ಕೋಟೆ ಕೆರೆಯಲ್ಲಿ, ವಿಶ್ವಗುರು ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಕನ್ನಡ ಕರ್ನಾಟಕದ ಉಳಿವಿಗಾಗಿ ಪ್ರಾಣ ತ್ಯಾಗ ಮಾಡಿದ ಅಮಟೂರು ಬಾಳಪ್ಪ, ವಡ್ಡರ ಯಲ್ಲಣ್ಣ, ಸರ್ದಾರ ಗುರುಸಿದ್ದಪ್ಪ. ಇಮ್ಮಡಿ ಪುಲಕೇಶಿ, ಕೆಂಪೇಗೌಡರು, ಬೆಳವಾಡಿ ಮಲ್ಲಮ್ಮ ಕೆಳದಿ ಚೆನ್ನಮ್ಮ ಸೇರಿದಂತೆ ಹಲವಾರು ಮಹನೀಯರು, ಈ ನಾಡಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದಂತಹ ಮಹಾನ್ ವ್ಯಕ್ತಿಗಳ ಮೂರ್ತಿಯನ್ನು ಬೆಳಗಾವಿ ಹೃದಯ ಭಾಗದಲ್ಲಿರುವ ಕೋಟೆ ಕೆರೆಯಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂದು ಮಹಾನಗ ಪಾಲಿಕೆಯ ಆಯುಕ್ತರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡರು.
ಕೋಟೆ ಕರೆಯಲ್ಲಿ ಕನ್ನಡ ನಾಡಿಗಾಗಿ ಹೋರಾಟ ಮಾಡಿದ ಎಲ್ಲ ಮಹನೀಯರ ಮೂರ್ತಿಗಳನ್ನು ಶೀಘ್ರದಲ್ಲಿಯೇ ಸ್ಥಾಪನೆ ಮಾಡಬೇಕು ಇಲ್ಲವಾದಲ್ಲಿ ಮಹಾನಗ ಪಾಲಿಕೆ ಹಾಗೂ ರಾಜ್ಯ ಸರಕಾರದ ವಿರುದ್ದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪಾಲಿಕೆ ಹಾಗೂ ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಈ ವೇಳೆ ಯುವ ಕರ್ನಾಟಕ ವೇಧಿಕೆಯ ಜಿಲ್ಲಾಧ್ಯಕ್ಷ ಶಿವು,ಎಸ್, ದೇವರವರ, ಜಿಲ್ಲಾ ಗೌರವಧ್ಯಕ್ಷರು ಶಂಕರ ಕಾಮಕರ, ಸೇರಿದಂತೆ ಸಂಘಟನೆಯ ಹಲವು ಕಾರ್ಯಕರ್ತರು, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!