ಬೆಳಗಾವಿ-19 : ಬೆಳಗಾವಿ ಕ್ಲಬ್ ಮಹಿಳೆಯರ ಸಂಘಟನೆ ವತಿಯಿಂದ ಕ್ಲಬ್ ಆವರಣದಲ್ಲಿ ಫ್ಯಾಷನ್ ಶೋ ಸ್ಪರ್ಧೆ ಆಯೋಜಿಸಲಾಗಿತ್ತು.
ಕ್ಲಬ್ ಮಹಿಳಾ ಸಂಘಟನೆ ಅಧ್ಯಕ್ಷೆ ಆ್ಯಮಿ ದೋಷಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಇಂತಹ ಸ್ಫರ್ಧೆಗಳ ಮೂಲಕ ಮಹಿಳೆಯರು ಕ್ರಿಯಾಶೀಲರಾಗಿರುವಂತೆ ಮಾಡುವುದು ನಮ್ಮ ಉದ್ಧೇಶ, ಸೋಲು, ಗೆಲುವಿಗಿಂತ ಭಾಗವಹಿಸುವುದು ಅತ್ಯಂತ ಮುಖ್ಯ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವುದು ಮತ್ತು ಕಾರ್ಯಕ್ರನಮದಲ್ಲಿ ಸೇರಿರುವುದು ನಮಗೆ ಇನ್ನಷ್ಟು ಕಾರ್ಯಕ್ರಮ ಆಯೋಜಿಸಲು ಉತ್ಸಾಹ ಮೂಡಿಸಿದೆ ಎಂದು ಆ್ಯಮಿ ದೋಷಿ ಹೇಳಿದರು.
59 ವರ್ಷ ವಯೋಮಿತಿಯೊಳಗಿನವರಿಗಾಗಿ ಮತ್ತು 60 ವರ್ಷ ಮೇಲ್ಪಟ್ಟವಿರಾಗಿ ಪ್ರತ್ಯೇಕ ಸ್ಫರ್ಧೆ ಆಯೋಜಿಸಲಾಗಿತ್ತು. ಒಟ್ಟೂ 30 ಮಹಿಳೆಯರು ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. 59 ವರ್ಷದೊಳಗಿನವರ ಸ್ಫರ್ಧೆಯಲ್ಲಿ ಒಟ್ಟೂ 18 ಜನರು ಭಾಗವಹಿಸಿದ್ದು, ಅಮೃತಾ ಸಿ ವಿಜೇತರಾದರು. 60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ 12 ಸ್ಫರ್ಧಾಳುಗಳಿದ್ದರು. ಜಯಾ ಜೋಶಿ ವಿಜೇತರಾದರು.
ಆರತಿ ಭಾಟಿಯಾ ಮತ್ತು ಸೋನಿಯಾ ಖುರಾನಾ ನಿರ್ಣಾಯಕರಾಗಿ ಭಾಗವಹಿಸಿದ್ದರು. ಸುಮಾರು 200ಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
